ಬಂಟ್ವಾಳ: ಆರೋಗ್ಯ, ಶಿಕ್ಷಣ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳ ಉತ್ತೇಜನದ ಉದ್ದೇಶದೊಂದಿಗೆ ಸಮಾನ ಮನಸ್ಕರ ಒಗ್ಗೂಡುವಿಕೆಯಲ್ಲಿ ಪುಂಜಾಲಕಟ್ಟೆಯಲ್ಲಿ ‘ಓಂ ಫ್ರೆಂಡ್ಸ್ ಪುಂಜಾಲಕಟ್ಟೆ’ ಎಂಬ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ.
ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಪುಂಜಾಲಕಟ್ಟೆಯ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ಸಂಘದ ಸ್ಥಾಪಕ ಅಧ್ಯಕ್ಷರಾಗಿ ‘ನಮ್ಮ ಬಂಟ್ವಾಳ’ ಸಮೂಹ ಸಂಸ್ಥೆಗಳ ಮಾಲಕ ಪ್ರಶಾಂತ್ ಎಂ. ಪುಂಜಾಲಕಟ್ಟೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಅನಿಲಡೆ, ಚಿದಾನಂದ ಮಾಣಿಂಜ ಹಾಗೂ ರತ್ನದೇವ್ ಪುಂಜಾಲಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಜಯರಾಜ್ ಅತ್ತಾಜೆ, ಕಾರ್ಯದರ್ಶಿಯಾಗಿ ಕಿಶೋರ್ ಎಚ್. ಹಟ್ಟತ್ತೋಡಿ, ಜತೆ ಕಾರ್ಯದರ್ಶಿಯಾಗಿ ಸಂದೀಪ್ ಹಟ್ಟತ್ತೋಡಿ ಹಾಗೂ ಕೋಶಾಧಿಕಾರಿಯಾಗಿ ಗಣೇಶ್ ಅನಿಲಡೆ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಓಂ ಪ್ರಸಾದ್
ಬಾರ್ಧಿಲ ಬಿ.ಸಿ.ರೋಡ್ ಹಾಗೂ ಪ್ರಶಾಂತ್ ಪ್ರತಿಮಾ ಪಾರೆಂಕಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಧಾಕರ್ ನಾಕುನಾಡು, ಅರುಣ್ ಹೆಗ್ಡೆ ಪುರಿಯ, ಜಯಂತ್ ಭಂಡಾರಿ ವಳಬೈಲು, ಯಶೋಧರ ನಾಕುನಾಡು, ಧೀರಜ್ ನಿಡ್ವಳ್, ನವೀನ್ ಕುಡುಮೇರು, ಕೃಷ್ಣಪ್ಪ ಮಾಡ, ಪ್ರದೀಪ್ ಕಜೆಕಾರು, ಧರ್ಣಪ್ಪ ಬಂಗೇರ, ರಘುವೀರ್ ಬಾಳಿಗಾ, ಮಂಜುನಾಥ ದಾಸ್, ವಿನೀತ್ ಮಾನ್ಯ, ಬಾಲಕೃಷ್ಣ ನಾಯಕ್, ಸತೀಶ್ ಆಚಾರ್ಯ ಬೆರ್ಕಳ, ಕಿಶೋರ್ ಮೂರ್ಜೆ, ಪ್ರಕಾಶ್ ಅನಿಲಡೆ, ಆರ್ಡಿಎಸ್ ರಫೀಕ್ ಹಾಗೂ ಭಾಸ್ಕರ ಬಸವನಗುಡಿ ಆಯ್ಕೆಯಾಗಿದ್ದಾರೆ.









