ಬಂಟ್ವಾಳ :ಅಭಿಯಂತರರು ಕಟ್ಟಡಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ಗ್ರಾಹಕರ ಮನ ಗೆಲ್ಲುವ ಕೆಲಸ ಮಾಡಬೇಕು ಹಾಗೂ ಹೊಸ ಆವಿಷ್ಕಾರದತ್ತ ಅಭಿಯಂತರರು ತೊಡಗಿಸಿಕೊಳ್ಳಬೇಕೆಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರಾದ ಶಿವ ಪ್ರಸನ್ನ ಹೇಳಿದರು.
ಅವರು ಬಂಟ್ವಾಳ ತಾಲೂಕು ಇಂಜಿನಿಯರ್ಸ್ ಎಸೋಸಿಯೇಶನ್ (ರಿ) ಬಿ.ಸಿ.ರೋಡ್ ಇದರ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯರವರ 164 ನೇ ಜನ್ಮ ದಿನಾಚರಣೆಯ ಅಂಗವಾಗಿ ಬಿ.ಸಿ.ರೋಡ್ ಹೋಟೇಲ್ ರಂಗೋಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷರಾಗಿ ತಾರಾನಾಥ ಕೊಟ್ಟಾರಿ ಫರಂಗೀಪೇಟೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇಶದ
ಅಭಿವೃದ್ಧಿಗೆ ಇಂಜಿನಿಯರ್ ಪಾತ್ರ ಮಹತ್ವವಾದದ್ದು ಎಂದು ಹೇಳಿದರು. ಸಂಘದ ಅಧ್ಯಕ್ಷರಾದ ಇಂಜಿನಿಯರ್ ಪ್ರಕಾಶ್ ಬಿ.ಸಿರೋಡ್ ಸರ್.ಎಂ. ವಿಶ್ವೇಶ್ವರಯ್ಯರವರ ಗುಣಗಾನ ಮಾಡಿದರು.
ಕಾರ್ಯದರ್ಶಿ ಇಂಜಿನಿಯರ್ ಸಂದೀಪ್ ಬಿ . ಸ್ವಾಗತಿಸಿ ಉಪಾಧ್ಯಕ್ಷ ಇಂಜಿನಿಯರ್ ರಾಜೇಶ್ ಭಂಡಾರಿ ವಂದಿಸಿದರು. ಮಾಸ್ಟರ್ ಮನ್ವಿತ್ ಪ್ರಾರ್ಥಿಸಿ ಇಂಜಿನಿಯರ್ ಬಿ.ಸತೀಶ್ ಕುಲಾಲ್ ನಿರೂಪಿಸಿದರು.















