ಬಂಟ್ವಾಳ : ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭತಂತ್ರಿಗಳ ನೇತೃತ್ವದಲ್ಲಿ ಫೆ.17ರಂದು ಆರಂಭಗೊಂಡಿದ್ದು ಫೆ.21ರಂದು ಮುಕ್ತಾಯಗೊಂಡಿತು.
ಫೆ.17ರಂದು ಧ್ವಜಾರೋಹಣಗೊಂಡಿದ್ದು, ಪ್ರತಿದಿನ ಸಂಜೆ ನಾನಾ ಭಜನಾ ತಂಡಗಳಿಂದ ಭಜನಾ ಸಂಕೀ ರ್ತನೆ, ರಾತ್ರಿ ರಂಗಪೂಜೆ, ಶ್ರೀಬಲಿ, ಪಲ್ಲಕಿ ಸೇವೆಗಳು, ಭೂತ ಬಲಿ, ಸೇವಾಸುತ್ತುಗಳು, ಸವಾರಿ, ಸುಡು ಮದ್ದು ಶಯನ, ಕಪಾಟ ಬಂಧನ, ಕವಾಟೋದ್ಘಾಟನೆ, ತೈಲಾಭ್ಯಂಗ, ಪಂಚಾಮೃತ ಅಭಿಷೇಕ, ಸಿಯಾಳ ಅಭಿಷೇಕ, ಆರಾಟಬಲಿ, ಆರಾಟಕಟ್ಟೆಯಲ್ಲಿ ಅವಕೃತ ಸ್ನಾನ, ದರ್ಶನಬಲಿ, ರಾಜಾಂ ಗಣ ಪ್ರಸಾದ, ಧ್ವಜಾವರೋಹಣ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು. ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮ ಯಕ್ಷಗಾನ ಬಯಲಾಟ
ನಡೆಯಿತು.
ಆನುವಂಶಿಕ ಮೊಕೇಸರ ಬಾಲಕೃಷ್ಣ ಶೆಟ್ಟಿ ತುಂಬೆಗುತ್ತು, ಗೌರವಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಧ್ಯಕ್ಷ ಅರುಣ್ ಆಳ್ವ, ಉತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ತುಂಬೆಗುತ್ತು, ಉತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಉತ್ಸವ ಸಮಿತಿ ಕಾರ್ಯ ದರ್ಶಿ ದೇವದಾಸ ತುಂಬೆ, ಕೋಶಾಧಿಕಾರಿ ವೇಣುಗೋಪಾಲ ಕೊಟ್ಟಾರಿ ತುಂಬೆ, ಅರ್ಚಕ ಅಭಿಲಾಷ್ ಭಟ್ ಹಾಗೂ ಸೇವಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು, ಉಪಾಧ್ಯಕ್ಷರ, ಜತೆಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಜಾತ್ರಾ ಮಹೋತ್ಸವಕ್ಕೆ ಸ ಸಹಕರಿಸಿದ್ದರು.














