ಬಂಟ್ವಾಳ :ಆರ್ ಎಸ್ ಎಸ್ ಎಸ್ ಹಿರಿಯ ಮುಖಂಡ, ಸಮಾಜ ಸೇವಕರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ (61) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೇ 22,ಸೋಮವಾರ ಮಧ್ಯಾಹ್ನ ನಿಧನರಾದರು.
ನಿಧನರಾದ ಸುದ್ದಿ ತಿಳಿಯುತಿದ್ದಂತೆ ಅವರ ಆಪ್ತ ವರ್ಗ, ಅಪಾರ ಬಂಧು ಮಿತ್ರರು, ಅಭಿಮಾನಿಗಳು ಹೀಗೆ ಸಾವಿರಾರು ಜನ ಮನೆಯ ಆವರಣದಲ್ಲಿ ಸೇರಿದ್ದರು, ಫರಂಗಿಪೇಟೆಯಿಂದ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ತರಲಾಯಿತು.ಅವರ ಅಂತಿಮ ದರ್ಶನಕ್ಕೆ ದ ಕ, ಉಡುಪಿ ಜಿಲ್ಲೆಗಳಿಂದಲೂ ಗಣ್ಯರು ಆಗಮಿಸಿದ್ದರು,ಅಂತ್ಯ ಕ್ರಿಯೆ ಗೂ ಮುನ್ನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.ಸರತಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು.ಮೃತರ ಅಂತ್ಯಕ್ರಿಯೆ ಸ್ವಗೃಹ ಬಳಿ ನೆರೆವೇರಿಸಲಾಯಿತು, ತನ್ನ ಬದುಕನ್ನೇ ಸಮಾಜ ಸೇವೆಗೆ ಅರ್ಪಿಸಿದ ಇವರ ಸಾವಿಗೆ ಸಾವಿರಾರು ಜನರು ಕಂಬನಿ ಮಿಡಿದರು.
ಆರ್ ಎಸ್ ಎಸ್ ಪುತ್ತೂರು ಸಂಘ ಚಾಲಕರಗಿದ್ದ ಇವರು ಬಿಜೆಪಿ ಅಭ್ಯರ್ಥಿಯಾಗಿ
ಜಿಲ್ಲಾ ಪಂಚಾಯಿತಿಗೆ ಸ್ಪರ್ದಿಸಿದ್ದರು. ಮೇರಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕೊಡಮಣ್ಣು ಶಾರದಾ ಪೂಜಾ ಮಹೋತ್ಸವದ ರೂವಾರಿ, ಹವ್ಯಾಸಿ ನಾಟಕ ಮತ್ತು ಚಲನಚಿತ್ರ ಕಲಾವಿದರಾಗಿ, ವಿವಿಧ ಧಾರ್ಮಿಕ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು ಸದಾ ನಗುಮೊಗದ,ಎಲ್ಲರಿಗೂ ಅಚ್ಚು ಮೆಚ್ಚಿನ ವ್ಯಕ್ತಿಯಾಗಿದ್ದರು.
ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಹರೀಶ ಪೂಂಜ, ಪ್ರತಾಪಸಿಂಹ ನಾಯಕ್, ಸುದರ್ಶನ್ ಮೂಡಬಿದ್ರೆ, ಸತೀಶ್ ಕುಂಪಲ, ಸಂತೋಷ್ ಕುಮಾರ್ ಬೋಳಿಯಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ರಾಮದಾಸ್ ಬಂಟ್ವಾಳ, ಕಿಶೋರ್ ಭಂಡಾರಿ, ರವೀಂದ್ರ ಕಂಬಳಿ, ದೇವಪ್ಪ ಪೂಜಾರಿ,ಕೆ.ಪದ್ಮನಾಭ ಕೊಟ್ಟಾರಿ, ಸಹಿತ ಹಲವಾರು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.















