ನರಿಕೊಂಬು:ಭಾರತ ಸೇವಾದಳದ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಶಿಬಿರ.

Coastal Bulletin
ನರಿಕೊಂಬು:ಭಾರತ ಸೇವಾದಳದ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಶಿಬಿರ.

ಬಂಟ್ವಾಳ :ಭಾರತ ಸೇವಾದಳ ಬಂಟ್ವಾಳ ತಾಲೂಕು ಸಮಿತಿ, ಹಾಗೂ ಸ. ಹಿ. ಪ್ರಾ. ಶಾಲೆ ನರಿಕೊಂಬು ಇವರ ಆಶ್ರಯದಲ್ಲಿ ಸೇವಾದಳ ಶಿಕ್ಷಕ/ಶಿಕ್ಷಕಿಯರ(ಶಾಖಾ ನಾಯಕರು ) ಪುನಶ್ಚೇತನ ಶಿಬಿರವು ನರಿಕೊಂಬು ಶಾಲೆಯಲ್ಲಿ ನಡೆಯಿತು.

ಶಿಕ್ಷಕರು ಹಾಗೂ ಸೇವಾದಳ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿ ಅಂಚನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಶಾಲೆಯಲ್ಲಿ ಈ ಶಿಬಿರ ನಡೆಯುತ್ತಿರುವುದು ನಮಗೆ ಸಂತೋಷ ತಂದಿದೆ. ಎಲ್ಲಾ ವ್ಯವಸ್ಥೆಯನ್ನು ಎಸ್ ಡಿ ಎಂ ಸಿ ವತಿಯಿಂದ ಮಾಡಲಾಗಿದೆ ಎಂದರು.

ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸೇವಾದಳ ಶಿಕ್ಷಕಿಯರಾದ ಬೊಂಡಾಳ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಖಾ ಹಾಗೂ ನರಿಕೊಂಬು ಶಾಲಾ ದೈಹಿಕ

ಶಿಕ್ಷಣ ಶಿಕ್ಷಕಿಯರನನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷರಾದ ಟಿ ಶೇಷಪ್ಪ ಮಾಸ್ಟರ್ ವಹಿಸಿ ಮಾತನಾಡುತ್ತಾ ಬಾಲ್ಯದಲ್ಲಿಯೇ ಮಕ್ಕಳಿಗೆ ಇಂತಹ ಸ್ವಯಂ ಸೇವಾ ಸಂಸ್ಥೆ ಗಳಿಗೆ ಸೇರಿಸಿ ತರಬೇತಿ ನೀಡಿದಾಗ ಮುಂದೆ ಯೋಗ್ಯ ಪ್ರಜ್ಞಾವಂತ ರಾಷ್ಟ್ರಪ್ರೇಮಿ ಪ್ರಜೆಗಳಾಗಳು ಸಾಧ್ಯಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ ಸೇವಾದಳ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶಿಕ್ಷಕಿ ಶೋಭಾ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಸಿಕ್ವೆರ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು ಸೇವಾದಳದ ಜಿಲ್ಲಾ ಸಂಘಟಕರಾದ ಮಂಜೇಗೌಡ ಪ್ರಸ್ತಾವಿಸಿದರು.ಶಿಕ್ಷಕ ಪರಮೇಶ್ವರ್ ವಂದಿಸಿದರು.ಶಿಕ್ಷಕಿ ಶ್ರೀಮತಿ ರೇಖಾ ವಂದಿಸಿದರು.

Leave a Comment