ಊರ್ವಸ್ಟೋರ್ :ಸ್ವಸ್ತಿಕಾ ವಿದ್ಯಾಸಂಸ್ಥೆಯಲ್ಲಿ 'ಡ್ರಗ್ಸ್ ಫ್ರೀ ಕ್ಯಾಂಪಸ್' ಅಭಿಯಾನಕ್ಕೆ ಚಾಲನೆ . ಡ್ರಗ್ಸ್ ಬಗ್ಗೆ ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ : ಸತೀಶ್ ಎನ್

Coastal Bulletin
ಊರ್ವಸ್ಟೋರ್ :ಸ್ವಸ್ತಿಕಾ ವಿದ್ಯಾಸಂಸ್ಥೆಯಲ್ಲಿ 'ಡ್ರಗ್ಸ್ ಫ್ರೀ ಕ್ಯಾಂಪಸ್' ಅಭಿಯಾನಕ್ಕೆ ಚಾಲನೆ . ಡ್ರಗ್ಸ್ ಬಗ್ಗೆ ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ : ಸತೀಶ್ ಎನ್

ಮಂಗಳೂರು: ಯುವ ಜನತೆಯನ್ನು ತನ್ನತ್ತ ಸೆಳೆಯುತ್ತಿರುವ ಅಪಾಯಕಾರಿ ಡ್ರಗ್ಸ್ಗೆ ಕಡಿವಾಣ ಹಾಕುವುದು ವಿದ್ಯಾರ್ಥಿಗಳ ಕೈಯಲ್ಲೇ ಇದೆ. ಮಾದಕ ದ್ರವ್ಯವದಿಂದ ದೂರವಿದ್ದರೆ ಮಾತ್ರ ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳಲು ಸಾಧ್ಯ ಎಂದು ಮಂಗಳೂರಿನ ಸೆನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಎನ್ ಅಭಿಪ್ರಾಯಪಟ್ಟರು.

ಮಂಗಳೂರಿನ ಉರ್ವಸ್ಟೋ‌ರ್ ನಲ್ಲಿರುವ ಸ್ವಸ್ತಿಕಾ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ವತಿಯಿಂದ ಗುರುವಾರ ಮಂಗಳೂರು ಸಿಟಿ ಪೊಲೀಸ್, ಸೆನ್ ಪೊಲೀಸ್ ಸ್ಟೇಷನ್ ಮತ್ತು ನಿಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸಹಯೋಗದಲ್ಲಿ ಸ್ಪಷ್ಟಿಕ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ 'ಡ್ರಗ್ ಫ್ರೀ ಕ್ಯಾಂಪಸ್' ಕಾರ್ಯಕ್ರಮ ಉದ್ಘಾಟಿಸಿ

ಅವರು ಮಾತನಾಡಿದರು. ಡ್ರಗ್ಸ್‌ನಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು. ಖುಷಿಗೆಂದು ಆರಂಭಿಸಿದ ಮಾದಕ ದ್ರವ್ಯ ಸೇವನೆ ಮುಂದೆ ನಮ್ಮನ್ನೇ ಬಲಿ ಪಡೆಯಬಹುದು. ಆದ್ದರಿಂದ ಈ ಬಗ್ಗೆ ಎಚ್ಚರ ಅಗತ್ಯ. ಸಮಾಜದಲ್ಲಿ ಮಾದಕ ದ್ರವ್ಯ ಸೇವನೆ ಯಿಂದಾಗುತ್ತಿರುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ವಿದ್ಯಾರ್ಥಿಗಳ ಮೂಲಕವೇ ಜಾಗೃತಿ ಮೂಡಿಸುತ್ತಿರುವ ಸಸಿಕಾ ಸಂಸ್ಥೆಯ ಕಾರ್ಯ ನಿಜಕ್ಕೂ ಮಾದರಿ ಯಾದುದು.ಎಲ್ಲಾ ವಿದ್ಯಾ ಸಂಸ್ಥೆಗಳಲ್ಲೂ ಈ ಕಾರ್ಯ ಆಗಬೇಕು ಎಂದರು.

ಸ್ವಸ್ತಿಕಾ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಡಾ.ರಾಘವೇಂದ್ರ ಹೊಳ್ಳ ಮಾತನಾಡಿ, ಸ್ವಸಿಕಾ ವಿದ್ಯಾ ಸಂಸ್ಥೆ ವಿನೂತನ ಕಾರ್ಯಕ್ರಮವೊಂದಕ್ಕೆ

ಸಾಕ್ಷಿಯಾಗುತ್ತಿದೆ. ಡ್ರಗ್ಸ್ ಮುಕ್ತವಾಗಿಸುವ ಪಣ ತೊಟ್ಟಿರುವ ಸಂಸ್ಥೆ ವಿದ್ಯಾರ್ಥಿಗಳ ಮೂಲಕವೇ ಜಾಗೃತಿ ಮೂಡಿಸುತ್ತಿದೆ. ನಮ್ಮ ವಿದ್ಯಾಸಂಸ್ಥೆ ಸೇರುವ ಪ್ರತಿ ವಿದ್ಯಾರ್ಥಿಗಳನ್ನು ಡ್ರಗ್ಸ್ ಟೆಸ್ಟ್ ಗೆ ಒಳಪಡಿಸಿ ಸ್ವಯಂ ಜಾಗೃತಿ ಮೂಡಿಸಲಾಗುತ್ತಿದೆ,

ಸಮಾಜ ಡ್ರಗ್ಸ್ ಮುಕ್ತವಾಗಬೇಕಾದರೆ ವಿದ್ಯಾರ್ಥಿ ಸಮುದಾಯ ಸಂಘಟಿತವಾಗಬೇಕು. ಪ್ರತಿ ಕಾಲೇಜಿನಲ್ಲಿ ಇದರ ವಿರುದ್ಧ ಆಂದೋಲನ ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವಸ್ತಿಕಾ ಸಂಸ್ಥೆ ಪೊಲೀಸರ ಹಾಗೂ ನಿಟ್ಟೆ ಸಂಸ್ಥೆಯ ಸಹಕಾರದೊಂದಿಗೆ ಡ್ರಗ್ಸ್ ಜಾಗೃತಿ ಮೂಲಕ ಹೊಸ ಬದಲಾವಣೆಯೊಂದಕ್ಕೆ ನಾಂದಿ ಹಾಡಿದೆ ಎಂದರು  

ಪೊರೆನ್ಸಿಕ್ ಮೆಡಿಸಿನ್ ವಿಭಾಗದ ಡಾ.ಮಹಬಲೇಶ್ ಶೆಟ್ಟಿ ಅವರು ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತಂತೆ ಮಾಹಿತಿ ನೀಡಿದರು. ಇದೇ ಸಂದರ್ಭ ಉರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ಭಾರತಿ ಜಿ ಅವರನ್ನು ಸನ್ಮಾನಿಸಲಾಯಿತು. ಸ್ವಸ್ತಿಕಾ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಾಲಿನಿ ಹೆಬ್ಬಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಪ್ರಭುಶಂಕರ್ ಸ್ವಾಗತಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Leave a Comment