ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಚಿರಣ್ಯ ಅರ್ ಪೂಜಾರಿ ಟೀಂ ಸೇವಾಪಥದ ಮೂಲಕ ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶ ದಾನಗೈದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಚಿರಣ್ಯ ಅರ್ ಪೂಜಾರಿ ವೀರಕಂಭ ಗ್ರಾಮದ ಗಣೇಶಕೋಡಿಯ ರಾಮಚಂದ್ರ ರೇಖಾ ದಂಪತಿಗಳ ಪುತ್ರಿಯಾಗಿದ್ದು, ವಿದ್ಯಾರ್ಥಿನಿಯ
ಈ ಸೇವಾ ಕಾರ್ಯಕ್ಕೆ ವಿದ್ಯಾರ್ಥಿನಿಯ ಕುಟುಂಬಸ್ಥರು, ಗ್ರಾಮಸ್ಥರು ಶಾಲಾ ಶಿಕ್ಷಕರು, ಸಹಪಾಠಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.















