ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಸೇಕ್ರೆಡ್ ಹಾಟ್ಸ್ ೯ ಹಿ. ಪ್ರಾ. ಆಂಗ್ಲ ಮಾಧ್ಯಮ ಶಾಲೆ ಕುಲಶೇಖರ ಮಂಗಳೂರು ದಕ್ಷಿಣ ವಲಯ ಅವರ ಸಂಯುಕ್ತಾಶ್ರಯದಲ್ಲಿ ಸೇಕ್ರೆಡ್ ಹಾಟ್ಸ್೯ ಹಿ. ಪ್ರಾ. ಆಂಗ್ಲ ಮಾಧ್ಯಮ ಶಾಲೆ ಕುಲಶೇಖರ ಮಂಗಳೂರು ಇಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂಧ್ಯಾವಳಿಯು ನಡೆಯಿತು.
ಈ ಪಂಧ್ಯಾವಳಿಯಲ್ಲಿ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳದ ಎಲ್ಲಾ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು.
ಇಶ ಅನ್ವಿ
ಪ್ರಾಥಮಿಕ ಹುಡುಗಿಯರ ಪ್ರಥಮ,ಪ್ರಾಥಮಿಕ ಹುಡುಗರ ಪ್ರಥಮ, ಹೈಸ್ಕೂಲ್ ಹುಡುಗರ ಪ್ರಥಮ,ಹೈಸ್ಕೂಲ್ ಹುಡುಗಿಯರ ದ್ವಿತೀಯ ಸ್ಥಾನ ಪಡೆಯಿತು.
ತಂಡದ ವಿವರ:
ಪ್ರಾಥಮಿಕ ವಿದ್ಯಾರ್ಥಿನಿಯರ ವಿಭಾಗದಲ್ಲಿ ಇಶ ಅನ್ವಿ, ದೃಷ್ಯ, ಸುಶ್ಮಿತ,
ಆರಾಧ್ಯ, ಸಿದಿಕ್ಷ : ಪ್ರಥಮ
ಪ್ರಾಥಮಿಕ ವಿದ್ಯಾರ್ಥಿಗಳ ವಿಭಾಗ ದಕ್ಷತ್, ರೋಹನ್, ಅನಂತ್ ರಾಮ್, ದಿಶಾಂತ್, ಸಮನ್ವಿತ್ : ಪ್ರಥಮ
ಹೈಸ್ಕೂಲ್ ವಿದ್ಯಾರ್ಥಿಗಳ ವಿಭಾಗದಲ್ಲಿ ಯಶ್ ರಾಜ್, ಚಿನ್ಮಯಿ, ವಿಷ್ಣು, ಧ್ಯಾನ್, ಜಸ್ವಿನ್: ಪ್ರಥಮ
ಹೈಸ್ಕೂಲ್ ವಿದ್ಯಾರ್ಥಿನಿಯರ ವಿಭಾಗದಲ್ಲಿ ವೈಭವಿ, ಮನ್ಮಿತ, ಆತ್ಮಿಕ, ನಿಷ್ಮಿತ, ಲಾಸ್ಯ: ದ್ವಿತೀಯ ಇವರು ಆಟಗಾರರಾಗಿ ಭಾಗವಹಿಸಿದ್ದರು
ದೈಹಿಕ ಶಿಕ್ಷಕರುಗಳಾದ ವೇದಾವತಿ,ಮುರುಳೀಧರ್, ಚಂದ್ರಹಾಸ ಸಹಕರಿಸಿದರು.















