Coastal Bulletin

ಬಂಟ್ವಾಳ :ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ತುಂಬೆ ಗ್ರಾಮ ಪಂ ವ್ಯಾಪ್ತಿಯ ಪೆರ್ಲಬೈಲು ಅಶ್ರಫ್ ಮನೆಯಿಂದ ದಿನೇಶ್ ಮನೆಯ ತನಕ 4ಲಕ್ಷ ರೂ ವೆಚ್ಚದ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ಇತ್ತೀಚೆಗೆ ನೆರವೇರಿತು.

ಈ ಸಂದರ್ಭದಲ್ಲಿ ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತುಂಬೆ ಗ್ರಾ ಪಂ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ಪಂ ಸದಸ್ಯರಾದ ಗಣೇಶ ಸಾಲಿಯಾನ್, ಇಬ್ರಾಹಿಂ ವಳವೂರ್, ತುಂಬೆ ಕಾಂಗ್ರೆಸ್ ವಲಯ ಅಧ್ಯಕ್ಷ ಜಗದೀಶ್ ಗಟ್ಟಿ, ಅಲ್ಪಸಂಖ್ಯಾತ ಘಟಕ ಮುಡಿಪು ಬ್ಲಾಕ್ ಅಧ್ಯಕ್ಷ ಇಮ್ತಿಯಾಜ್

ತುಂಬೆ,ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನಿಸಾರ್ ಅಹಮದ್, ಡಿ ಸಿ ಸಿ ಸದಸ್ಯರಾದ ಮೋನಪ್ಪ ಮಜಿ, ರಶೀದ್ ತುಂಬೆ, ಮಾಜಿ ಪಂ ಸದಸ್ಯ ಪ್ರಕಾಶ ಬಿ ಶೆಟ್ಟಿ, ಪ್ರಮುಖರಾದ ದೇವದಾಸ ಪರ್ಲಕೆ, ಪ್ರವೀಣ್ ಕೊಟ್ಟಿಂಜ, ಅಜಿಜ್ ರಾಮಲ್ ಕಟ್ಟೆ, ಹರೀಶ್ ರೊಟ್ಟಿಗುಡ್ಡೆ, ಲೋಕನಾಥ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

Leave a Comment