ಬಂಟ್ವಾಳ: ನಮ್ಮ ಪಕ್ಷದ ಕಾರ್ಯಕರ್ತರು ಶ್ರದ್ಧೆ, ನಿಷ್ಠೆಯಿಂದ ದುಡಿದ ಪರಿಣಾಮ ಹಾಗೂ ಕಳೆದ ೫ ವರ್ಷಗಳ ಅಭಿವೃದ್ಧಿ ಕಾರ್ಯ, ಶಾಂತಿ, ಸೌಹಾರ್ದಯುತ ಬಂಟ್ವಾಳ ನಿರ್ಮಾಣ ಈ ಬಾರಿಗೆಯ ಗೆಲುವಿಗೆ ಕಾರಣವಾಗಿದೆ ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ಗೆಲುವು ಸಾಧಿಸಿದ ಬಳಿಕ ಬಂಟ್ವಾಳ ಬಿಜೆಪಿ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಬೇಕಾದ ಸ್ಥಿತಿ ಇದ್ದು, ಸಿಕ್ಕ ಅವಕಾಶಗಳನ್ನು ಬಳಸುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.
ಈ ಬಾರಿ ವಿರೋಧ ಪಕ್ಷದಲ್ಲಿದ್ದು, ಆಡಳಿತ ಪಕ್ಷದಲ್ಲಿದ್ದರೆ ಹಿಂದಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡುವುದಕ್ಕೆ ಅವಕಾಶವಾಗುತ್ತಿತ್ತು. ಆದರೂ ಗರಿಷ್ಠ ಪ್ರಯತ್ನ
ಮಾಡಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಲಿದ್ದೇನೆ. ಜತೆಗೆ ಬಂಟ್ವಾಳದಲ್ಲಿ ಬಿಜೆಪಿಯಿಂದ 2ನೇ ಬಾರಿಗೆ ಗೆದ್ದ ಮೊದಲ ಶಾಸಕನಾಗಿರುವುದಕ್ಕೆ ಹೆಚ್ಚು ಸಂತೋಷ ಪಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಿಯೋನಿಕ್ಸ್ ನ ಹರಿಕೃಷ್ಣ ಬಂಟ್ವಾಳ,ಕ್ ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡದ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಾರ್ಯದರ್ಶಿಗಳಾದ ರವೀಶ್ ಕರ್ಕಳ, ಡೊಂಬಯ್ಯ ಅರಳ ಮತ್ತಿತರರು ಉಪಸ್ಥಿತರಿದ್ದರು.















