ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಮಹಿಳೆಯೊಬ್ಬರು 15 ಪವನು ಚಿನ್ನಾಭರಣ ಇರುವ ಬ್ಯಾಗನ್ನು ಕಳೆದು ಕೊಂಡಿದ್ದು, ಇದು ಭಂಡಾರಿ ಬೆಟ್ಟು ನಿವಾಸಿ ಮೈಕಾನಿಕ್ ಗಣೇಶ್ ಆಚಾರ್ಯ ಇವರಿಗೆ ಸಿಕ್ಕಿದ್ದು, ಈ 10 ಲಕ್ಷಕ್ಕಿಂತಲೂ ಮಿಗಿಲಾದ ಮೌಲ್ಯದ ಬ್ಯಾಗನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದು ಇತರರಿಗೂ ಮಾದರಿಯಾಗಿರುತ್ತಾರೆ,
ಇವರ ಪ್ರಾಮಾಣಿಕತೆಯನ್ನು ಮನಗಂಡು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ವತಿಯಿಂದ ಅಧ್ಯಕ್ಷರಾದ ಕಿಶೋರ್ ಇವರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಗಾಣದ ಪಡ್ಪು ಇಲ್ಲಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ,
ವಲಯ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಕೋಶಾಧಿಕಾರಿ ವರುಣ್ ಕಲ್ಲಡ್ಕ, ಮಾಜಿ ಅಧ್ಯಕ್ಷರುಗಳಾದ ಸತೀಶ್ ಬಿ . ಸಿ .ರೋಡ್, ಸುಕುಮಾರ್ ಬಂಟ್ವಾಳ, ಹರೀಶ್ ಮಾಣಿ, ಹರೀಶ್ ಕುಂದರ್, ಸದಸ್ಯರುಗಳಾದ ಮಹೇಶ್ ಶೆಟ್ಟಿ, ರಾಜರತ್ನ, ಹರೀಶ್ ನಾಟಿ, ರವಿ ಪ್ರಕಾಶ್, ವಿಕ್ರಮ್, ಭಾಸ್ಕರ್, ವಿಕೇಶ್, ಮೋಹನದಾಸ, ಪುರೋಹಿತರಾದ ತಿಲಕ್ ಶಾಂತಿ ಉಪಸ್ಥಿತರಿದ್ದರು.















