Coastal Bulletin

ವಿಜಯವಾಡ : ಮಹಿಳಾ ಗ್ರಾಹಕರಿಗೆ ಲೋನ್​ ಬೇಕಾದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್​ ಮ್ಯಾನೇಜರ್​ಗೆ ಲೈಂಗಿಕ ಸುಖ ನೀಡಬೇಕಂತೆ. ಈ ರೀತಿ ಕಿರುಕುಳ ಪ್ರಕರಣ ಆಂಧ್ರದ ನೆಲ್ಲೂರು ಜಿಲ್ಲೆಯ ಪೊದಲಕುರ್​ ಶಾಖೆಯಲ್ಲಿ ಬೆಳಕಿಗೆ ಬಂದಿದ್ದು ಮ್ಯಾನೇಜರ್ ನಿಜ ಬಣ್ಣ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಆಂಧ್ರ ಪ್ರದೇಶದ ಪೊದಲಕುರ್ ನಲ್ಲಿರುವ ಎಸ್ ಬಿಐ ಶಾಖೆಯ ಮ್ಯಾನೇಜರ್​ ಆಗಿರುವ ನಾಗೇಶ್, ಕಚೇರಿಯಲ್ಲಿನ ಮಹಿಳಾ ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ, ಮಹಿಳಾ ಗ್ರಾಹಕರ ಮೇಲೂ ತನ್ನ ಕಾಮದೃಷ್ಟಿ ಬೀರಿರುವ ಘಟನೆ ವರದಿಯಾಗಿದೆ.ಅಲ್ಲದೆ, ಈತನ ಕಿರುಕುಳ ತಾಳದೇ ಕೆಲವು ಉದ್ಯೋಗಿಗಳು ಸ್ವಯಂ ವರ್ಗಾವಣೆ ತೆಗೆದುಕೊಂಡಿದ್ದಾರಂತೆ.

ಸಿಸಿಟಿವಿಯಲ್ಲಿ ಬ್ಯಾಂಕ್​

ಮ್ಯಾನೇಜರ್​ ಚೆಲ್ಲಾಟ ದಾಖಲಾದ ಬಳಿಕ ಆತನ ದುಷ್ಕೃತ್ಯಗಳೆಲ್ಲ ಒಂದೊಂದಾಗಿ ಬಯಲಿಗೆ ಬಂದಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮ್ಯಾನೇಜರ್​ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ದಾಖಲಾಗಿದೆ.


ಸದ್ಯ ನಾಗೇಶ್​ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಗೇಶ್​ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment