ಮಣಿಪುರ : ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸೈಖೋಮ್ ಮೀರಾಬಾಯಿ ಚಾನು ಅವರ ಜೀವನ ಆಧಾರಿತ ಮಣಿಪುರಿ ಚಿತ್ರ ನಿರ್ಮಾಣವಾಗಲಿದೆ.
ಸಿನಿಮಾ ಕುರಿತ ಒಪ್ಪಂದಕ್ಕೆ ಈಗಾಗಲೇ ಮೀರಾಬಾಯಿ ಚಾನು ಮತ್ತು ಇಂಫಾಲ್ ಮೂಲದ ‘ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್’ ಸಂಸ್ಥೆ ಸಹಿ ಮಾಡಿದೆ ಎಂದು ಖ್ಯಾತ ನಾಟಕಕಾರ ಮತ್ತು ಸಿನೆಮಾ ನಿರ್ಮಾಣ ಕಂಪನಿಯ ಮುಖ್ಯಸ್ಥ ಮನೊಬಿ ಎಂ. ಎಂ.ಮಾಹಿತಿ ನೀಡಿದ್ದಾರೆ.
ಈ
ಕುರಿತು ಪಿಟಿಐ ಜೊತೆ ಮಾತನಾಡಿರುವ ಮನೋಬಿ‘ಚಾನು ಜೀವನಾಧಾರಿತ ಸಿನಿಮಾದ ಚಿತ್ರೀಕರಣ ಆರಂಭಿಸಲು ಆರು ತಿಂಗಳಾದರೂ ಸಮಯ ಬೇಕು. ಮೀರಾಬಾಯಿ ಪಾತ್ರವನ್ನು ಎಲ್ಲ ರೀತಿಯಿಂದಲೂ ಸರಿಯಾಗಿ ನಿಭಾಯಿಸಬಲ್ಲ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ.ಈ ಚಿತ್ರವು ಇಂಗ್ಲಿಷ್ ಸೇರಿದಂತೆ ಭಾರತದ ಇತರ ಭಾಷೆಗಳಿಗೆ ಡಬ್ ಆಗಲಿದೆ'ಎಂದು ತಿಳಿಸಿದ್ದಾರೆ.















