ಪ್ರತಿಭಾವಂತ ಕಲಾವಿದೆ ಸುರವಿ ಹಂಡೇಲ್ ಇವರ ಭರತನಾಟ್ಯ ರಂಗ ಪ್ರವೇಶ ಸಮಾರಂಭ.

Coastal Bulletin
ಪ್ರತಿಭಾವಂತ ಕಲಾವಿದೆ ಸುರವಿ ಹಂಡೇಲ್ ಇವರ ಭರತನಾಟ್ಯ ರಂಗ ಪ್ರವೇಶ ಸಮಾರಂಭ.

ಮುಂಬಯಿ :. ಮುಂಬಯಿ ವಿನ್ಯಾಸ ಸಂಸ್ಥೆ "ಸುವಿದ"ದ ಪ್ರವರ್ತಕ. ಮುಂಬೈ ಕುಲಾಲ ಸಂಘದ ಹಿರಿಯ ಸದಸ್ಯ ದಿವಂಗತ ಸುಂದರ್ ಕರ್ಮರನ್ ಅವರ ಸುಪುತ್ರ ಸೂರಜ್ ಹಂಡೇಲ್ ಮತ್ತು ಜ್ಯೋತಿ ಸೂರಜ್ ಹಂಡೇಲ್ ಇವರ ಸುಪುತ್ರಿ ಕುಮಾರಿ ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ರಂಗ ಪ್ರವೇಶ ಸಮಾರಂಭವು ಅ 20ರಂದು ಮೈಸೂರು ಅಸೋಷಿಯೇಷನ್ ಮಾಟುಂಗಾ (ಮಧ್ಯ ರೈಲ್ವೆ) ಮುಂಬಯಿ ಇಲ್ಲಿ ನಡೆಯಿತು .

ನೃತ್ಯ ಗುರು ಆನಂದ ಸಚ್ಚಿದಾನಂದನ್ ಮತ್ತು ಜಯಲಕ್ಷ್ಮಿ ಆನಂದ್ ಇವರ ಶಿಷ್ಯೆ ಸುರವಿ ಹಂಡೇಲ್ ಇವರು ಈಗಾಗಲೇ ಭರತನಾಟ್ಯ ದಲ್ಲಿ ಉತ್ತಮ ತರಬೇತಿ ಪಡೆದಿದ್ದು ಒರ್ವ ಪ್ರತಿಭಾವಂತ ಭರತನಾಟ್ಯ ಕಲಾವಿದೆ.


ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ಸಂದರ್ಭದಲ್ಲಿ ಸೂರಜ್ ಮತ್ತು ಜ್ಯೋತಿ ಸೂರಜ್

ಅವರ ಪರಿವಾರದವರು ಹಿತೈಷಿಗಳು ಹಾಗೂ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ .ಗೌರವಾಧ್ಯಕ್ಷ ದೇವದಾಸ್ ಕುಲಾಲ್. ಮಾಜಿ ಅಧ್ಯಕ್ಷ ಗಿರೀಶ್ ಬಿ ಸಾಲಿಯನ್. ಮತ್ತಿತರ ಪದಾಧಿಕಾರಿಗಳು ಸ್ಥಳೀಯ ಸಮಿತಿಯ ಪದಾಧಿಕಾರಿಗಳು. ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಮಂಗಳೂರು ಇದರ ಆಡಳಿತ ಮುಕ್ತೇಶ್ವರ ಪುರುಷೋತ್ತಮ್ ಕುಲಾಲ್ ಕಲ್ಬಾವಿ. ಮತ್ತಿತರರು ಉಪಸ್ತರಿದ್ದು ಆಶೀರ್ವದಿಸಿದರು.

Leave a Comment