ಬಂಟ್ವಾಳ :ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಗ್ರಾಮಚಾವಡಿ ಶಾಖೆಯ ಉದ್ಘಾಟನಾ ಸಮಾರಂಭ.

Coastal Bulletin
ಬಂಟ್ವಾಳ :ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಗ್ರಾಮಚಾವಡಿ ಶಾಖೆಯ ಉದ್ಘಾಟನಾ ಸಮಾರಂಭ.

ಬಂಟ್ವಾಳ :ಬಿ.ಸಿರೋಡ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಸಹಕಾರಿ ಸಂಘದ 10 ನೇ ಶಾಖೆಯು ಅಕ್ಟೋಬರ್ 13 ರಂದು ಬೆಳಿಗ್ಗೆ ಗಂಟೆ 9.00 ಕ್ಕೆ ಫಜೀರು ಗ್ರಾಮದ ಆಶೀರ್ವಾದ್ ಕಾಂಪ್ಲೆಕ್ಸ್ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಮರ್ಸಿ ಕೇರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಿ.ಎ. ಮ್ಯಾಕ್ಸಿಮ್ ಎಮ್ ಫೆರ್ನಾಂಡಿಸ್ ಇವರು ಉದ್ಘಾಟಿಸಿದರು.

ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಚರ್ಚ್ ಧರ್ಮಗುರುಗಳಾದ ಫಾ। ಅಲ್ಬನ್ ಡಿಸೋಜ ಇವರು ಆಶೀರ್ವಚನ ನೀಡಿದರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಕೆ ರವೀಂದ್ರ ರೈ ರಾಮಕೃಷ್ಣ,ಪ್ರೌಢ ಶಾಲೆ ಹರೇಕಳ, ಗಣಕ ಯಂತ್ರ ಉದ್ಘಾಟನೆಯನ್ನು ಫ್ಲೋರಿನ್ ಡಿಸೋಜ ಉಪಾಧ್ಯಕ್ಷರು ಫಜೀರು ಗ್ರಾಮ ಪಂಚಾಯತ್ ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ವಲೇರಿಯನ್ ಡಿಸೋಜಿ, ಉಪಾಧ್ಯಕ್ಷರು ಫಜೀರು ಚರ್ಚ್ ಪಾಲನಾ ಮಂಡಳಿ ಹಾಗೂ ಗ್ಲೆನ್ರಿಲ್ ಅರುಣ್ ರೋಚ್ ಕಟ್ಟಡ ಮಾಲಕರು ಉಪಸ್ಥಿತರಿದ್ದರು.

ನೂತನ ಶಾಖೆಗೆ ಸುಮಾರು ರೂ.1.10 ಕೋಟಿ

ಠೇವಣಿ ಸಂಗ್ರಹ ಗೊಂಡಿದ್ದು, ಅತಿಥಿ ಗಣ್ಯ ಸಮ್ಮುಖದಲ್ಲಿ ಠೇವಣಿ ಪತ್ರಗಳನ್ನು ಠೇವಣಿದಾರರಿಗೆ ವಿತರಿಸಲಾಯಿತು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೊ ಇವರು ವಹಿಸಿದ್ದು,  ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಸ್ಥೆಯ ಸಂಕ್ಷಿಪ್ತ ವರದಿ ಮಂಡಿಸಿದರು. ಸಿ.ಎ. ಮ್ಯಾಕ್ಸಿಮ್ ಎಮ್ ಫೆರ್ನಾಂಡಿದ್ ಇವರು ಉಳಿತಾಯದ ಮಹತ್ವವನ್ನು ತಿಳಿಸಿ ಶಾಖೆ ಪ್ರಗತಿ ಹೊಂದಲು ಎಲ್ಲರ ಸಹಕಾರವನ್ನು ಕೋರಿ ಶುಭ ಹಾರೈಸಿದರು. 

ಸಂಘದ ನಿರ್ದೇಶಕರಾದ ಎವಿನ್ ಲೋಬೊ ಇವರು ವಂದನಾರ್ಪಣೆ ಗೈದರು ಹಾಗೂ ಸಿಬ್ಬಂದಿ ಡೆಲ್ಸನ್ ರೋಯಲ್ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment