ಜ್ಯೋತಿಗುಡ್ಡೆ: ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ನವರಾತ್ರಿ ಉತ್ಸವ,ಧಾರ್ಮಿಕ ಸಭೆ.ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ : ಸೀತಾರಾಮ ಎ.

Coastal Bulletin
ಜ್ಯೋತಿಗುಡ್ಡೆ: ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ನವರಾತ್ರಿ ಉತ್ಸವ,ಧಾರ್ಮಿಕ ಸಭೆ.ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ : ಸೀತಾರಾಮ ಎ.

ಬಂಟ್ವಾಳ: ಧಾರ್ಮಿಕ ಆಚರಣೆ ಮೂಲ ಉದ್ದೇಶವಾದರೂ ಸಾಮಾಜಿಕ ಕಾಳಜಿ ಶ್ರದ್ಧಾಕೇಂದ್ರದ ಆಶಯವಾಗಬೇಕು. ಅನ್ನದಾನ, ವಿದ್ಯಾದಾನಾದಿ ಸಮಾಜಮುಖಿ ಕೆಲಸಗಳು ಪ್ರಸಾದರೂಪವಾಗಿ ಫಲಾನುಭವಿಯ ಬಳಿ ಸೇರಬೇಕು. ಕೊಡುವ ಅಹಂಭಾವ ಹಾಗೂ ಪಡೆದ ದೀನ ಭಾವವೂ ಇರದಂತೆ ನಡೆಯುವುದೇ ಧರ್ಮದ ಆಶಯವಾಗಬೇಕು ಎಂದು ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರ ಅರಕೆರೆ ಬೈಲು ಮಂಗಳೂರು ಇದರ ಅಧ್ಯಕ್ಷರಾದ ಸೀತಾರಾಮ ಎ ಅಭಿಪ್ರಾಯ ಪಟ್ಟರು.


ಅವರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜ್ಯೋತಿಗುಡ್ಡೆಯ ನವರಾತ್ರಿ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತಾಡಿದರು. 


ಮತ್ತೋರ್ವ ಮುಖ್ಯ ಅತಿಥಿಯಾದ ನಿವೃತ್ತ ಎ.ಆರ್.ಟಿ.ಒ ವಿಶ್ವನಾಥ ನಾಯ್ಕ ಮಾತನಾಡಿ “ಮನಃಶುದ್ಧಿ ಮನಃಶಾಂತಿಗಾಗಿ ನಡೆಯಬೇಕಾಗಿದ್ದ ಶ್ರದ್ಧೆ, ಆಚರಣೆಗಳು ಈ ದಿನಗಳಲ್ಲಿ ಕೇವಲ ತೋರ್ಪಡಿಕೆಯ ಕ್ರಮಗಳಾಗಿ ಪರಿವರ್ತಿತವಾಗುತ್ತಿರುವುದು ಖೇದಕರ ಸಂಗತಿ. ಹೆಚ್ಚು ಖರ್ಚು ಮಾಡುವುದು, ಮೆರೆಯುವುದು, ಪೂಜಾದಿ ಆಚರಣೆಗಳನ್ನು ಹಣದ ಖರ್ಚಿನ ಆಧಾರದ ಮೇಲೆ ಪ್ರದರ್ಶಿಸುವುದನ್ನು ಎಂದಿಗೂ ಶ್ರದ್ಧೆ ಅಥವಾ ಭಕ್ತಿ ಎಂದು ಕರೆಯಲಾಗದು. ವಿಶೇಷವಾಗಿ ಹಿಂದೂ ದೇವಸ್ಥಾನವೊಂದರ ಹಬ್ಬದ ಸಡಗರದ ವೇದಿಕೆಯಲ್ಲಿ ಎಲ್ಲಾ ಸಾಧನೆ ಮಾಡಿದ ಇತರೆ ಮತಾಚರಣೆಯ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಕೂಡ ಉತ್ತಮ ಕೆಲಸವಾಗಿದೆ ಎಂದು ಅಭಿಪ್ರಾಯ ಪಟ್ಟರು. 


ಶೈಲೇಶ್ ಪೂಜಾರಿ, ಕುಚ್ಚಿಗುಡ್ಡೆ, ಅಧ್ಯಕ್ಷರು, ಗುತ್ತಿಗೆದಾರರ ಸಂಘ, ಬಂಟ್ವಾಳ ತಾಲೂಕು ಪೂಜೇಶ್ ಆಚಾರ್ಯ, ಅಧ್ಯಕ್ಷರು, ಎಳೆಯರ ಬಳಗ (ರಿ.) ರಾಮಲ್ ಕಟ್ಟೆ, ಅನಿಲ್‌ ಪಂಡಿತ್‌ ಜ್ಯೋತಿಷ್ಯರು – ಕೃಷ್ಣಾರಾಧ್ಯಂ ಇವರು ಅತಿಥಿಯಾಗಿ ಭಾಗವಹಿಸಿದರು. ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಜ್ಯೋತಿಗುಡ್ಡೆ ಇದರ ಸಂಚಾಲಕ ನಾರಾಯಣ ನಾಯ್ಕ್ ಪೆರ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

ಈ ಸಂದರ್ಭದಲ್ಲಿ ಸ್ಥಳೀಯ ಸರಕಾರಿ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ಅತ್ಯುತ್ತಮ

ಸಾಧನೆಗೈದ ವಿದ್ಯಾರ್ಥಿಗಳಾದ - ಕು ವೈಷ್ಣವಿ, (ದ.ಕ.ಜಿ.ಪ.ಹಿ. ಪ್ರಾ. ಶಾಲೆ, ಬ್ರಹ್ಮರಕೂಟ್ಟು) ಕು ಲಹರಿ ಎಸ್. ಮತ್ತು ದೇವಿಕಾ ಆರ್. (ದ.ಕ.ಜಿ.ಪ.ಹಿ.ಪ್ರಾ ಶಾಲೆ, ಕಳ್ಳಿಗೆ, ನೆತ್ರಕೆರೆ) ಕು ಕಾವ್ಯ, (ದ.ಕ.ಜಿ.ಪ ಮಾದರಿ ಹಿ. ಪ್ರಾ. ಶಾಲೆ, ತುಂಬೆ), ಕು ಸುಶಾನ್, (ದ.ಕ.ಜಿ.ಪಂ.ಹಿ.ಪ್ರಾ. ಶಾಲೆ, ಕೊಡಮಣ್ಣು) ಕು ಮುಹಮ್ಮದ್ ಮುಬಶಿರ್, (ಸರಕಾರಿ ಪ್ರೌಢ ಶಾಲೆ, ಅಜ್ಜಿಬೆಟ್ಟು) ಕು ಶಿಫಾನ, (ಸ.ಪ.ಪೂ.ಕಾಲೇಜು (ಪ್ರೌಢಶಾಲೆ ವಿಭಾಗ), ಬೆಂಜನಪದವು) ಕು ಕುಶಿ, (ಸರಕಾರಿ ಹಿ.ಪ್ರಾಶಾಲೆ, ಬಂಟ್ವಾಳ ಮೂಡ) ಹಾಗೂ ಎಂ.ಎ ಹಿಂದಿಯಲ್ಲಿ ಪ್ರಥಮ ರ್ಯಾಂಕ್‌ ಪಡೆದ ಕು ರಶ್ಮಿತಾ ಪೆರಿಯೋಡಿ ಇವರನ್ನು ಸನ್ಮಾನಿಸಲಾಯಿತು.

ಸೇವಾ ಟ್ರಸ್ಟಿ ಟಿ ತಾರಾನಾಥ ಕೊಟ್ಟಾರಿ ಪ್ರಸ್ತಾಪಿಸಿ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಕುಮಾರ್ ರೆಂಜೋಡಿ ಸ್ವಾಗತಿಸಿದರು.ಮಲ್ಲಿಕಾ ಎಂ ಜ್ಯೋತಿಗುಡ್ಡೆ ಪ್ರಾರ್ಥಿಸಿ, ಸುಜಾತ ನವೀನ್‌ ಗುಂಡಿಬೆಟ್ಟು ಹಾಗೂ ರೇಶ್ಮಾ ಯಶವಂತ್‌ ಮುಂಡಾಜೆ ಸನ್ಮಾನ ಪತ್ರ ವಾಚಿಸಿದರು, ವೇಣುಗೋಪಾಲ್‌ ಜ್ಯೋತಿಗುಡ್ಡೆ ವಂದಿಸಿ,ಉದಯ ಕುಮಾರ್‌ ಜ್ಯೋತಿಗುಡ್ಡೆ ನಿರೂಪಿಸಿದರು.

ಸಭಾಕಾರ್ಯಕ್ರಮದ ಬಳಿಕ ಯಕ್ಷಜ್ಯೋತಿ ಜ್ಯೋತಿಗುಡ್ಡೆ ಸಂಯೋಜನೆಯಲ್ಲಿ ಯಕ್ಷ ಕಾವ್ಯ ತರಂಗಿಣಿ (ರಿ.) ದಿವಂಗತ ಚಂದಪ್ಪ ಪೂಜಾರಿ ಪ್ರತಿಷ್ಠಾನ, ಬಂಟ್ವಾಳ ದರ್ಬೆ ಇವರಿಂದ ಯಕ್ಷಗಾನ "ಕೃಷ್ಣ ಲೀಲೆ - ಕಂಸ ವಧೆ" ಯಕ್ಷಗಾನ ಬಯಲಾಟ ಹಾಗೂ ಶ್ರೀ ಅಂಬಿಕಾ ಯಕ್ಷಗಾನ ಕಲಾ ಮಂಡಳಿ, ಅಮ್ಮುಂಜೆ ಕಲಾಯಿ ಇವರಿಂದ ಕರ್ಣಾರ್ಜುನ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು.

Leave a Comment