ಚೈತ್ರ ಕುಂದಾಪುರ ಗ್ಯಾಂಗ್ ನ A3 ಆರೋಪಿ ಅಭಿನವ ಹಾಲಾಶ್ರೀ ಸ್ವಾಮೀಜಿ ಬಂಧನ.

Coastal Bulletin
ಚೈತ್ರ ಕುಂದಾಪುರ ಗ್ಯಾಂಗ್ ನ A3 ಆರೋಪಿ ಅಭಿನವ ಹಾಲಾಶ್ರೀ ಸ್ವಾಮೀಜಿ ಬಂಧನ.

ಬೆಂಗಳೂರು : ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವ ನಿಟ್ಟಿನಲ್ಲಿ 5 ಕೋಟಿ ರೂ. ವಂಚನೆ ಮಾಡಿದ ಚೈತ್ರಾ ಕುಂದಾಪುರ ನೇತೃತ್ವದ ತಂಡದ ಎ3 ಆರೋಪಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಓರಿಸ್ಸಾದಲ್ಲಿ ಬಂಧಿಸಿದ್ದಾರೆ.

ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ವಂಚನೆ ಮಾಡಲಾದ 5 ಕೋಟಿ ರೂ. ಹಣದಲ್ಲಿ 1.5 ಕೋಟಿ ರೂ. ಹಣವನ್ನು ಈ ಅಭಿನವ ಹಾಲಶ್ರೀ ಸ್ವಾಮೀಜಿ ಪಡೆದುಕೊಂಡಿದ್ದಾರೆನ್ನಲ್ಲಾಗಿದೆ. ಈ ಪ್ರಕರಣದ ಹೊರಗೆ ಬರುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಈ ಪ್ರಕರಣದ ಒಟ್ಟು 10 ಆರೋಪಿಗಳ ಪೈಕಿ 7 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕೋರ್ಟ್‌ ನಿರ್ದೇಶದನದ ಮೇರೆಗೆ ವಿಚಾರಣೆ ಮಾಡಲಾಗುತ್ತದೆ. ಆದರೆ, ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ ಅಭಿನವ ಸ್ವಾಮೀಜಿ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಜಾಮೀನಿಗಾಗಿ ನ್ಯಾಯಾಲಯ ಮೊರೆ ಹೋಗಿದ್ದರು. ಆದರೆ, ಬೇಲ್ ನೀಡಲು ಕೋರ್ಟ್‌ ನಿರಾಕರಣೆ ಮಾಡಿತ್ತು. ಇದಾದ ನಂತರ ಮೈಸೂರು, ಬೆಂಗಳೂರು, ವಿಜಯನಗರ ಜಿಲ್ಲೆಯ ಹಡಗಲಿ ಸೇರಿದಂತೆ ಎಲ್ಲೆಡೆ ಸ್ವಾಮೀಜಿಗಾಗಿ ಸಿಸಿಬಿ ಪೊಲೀಸರು ಶೋಧನೆ ಮಾಡಿದ್ದರು.

Leave a Comment