ಪೋಲೀಸರು ಹಾಗೂ ನಕ್ಸಲರ ನಡುವೆ ಭೀಕರ ಗುಂಡಿನ ಚಕಮಕಿ- 18 ನಕ್ಸಲರು ಎನ್ಕೌಂಟರ್ ಗೆ ಬಲಿ.

Coastal Bulletin
ಪೋಲೀಸರು ಹಾಗೂ ನಕ್ಸಲರ ನಡುವೆ ಭೀಕರ ಗುಂಡಿನ ಚಕಮಕಿ- 18 ನಕ್ಸಲರು ಎನ್ಕೌಂಟರ್ ಗೆ ಬಲಿ.

ರಾಯ್‌ಪುರ:2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯ ದಿನಗಳು ಹತ್ತಿರವಾಗುತ್ತಿರುವ ನಡುವೆ ಛತ್ತೀಸ್‌ಗಢದ ಕಂಕೇರ್‌ನಲ್ಲಿ ಭಾರತದ ಸೇನಾಪಡೆಗಳು ಭರ್ಜರಿ ಬೇಟೆ ನಡೆಸಿದ್ದು, 18 ನಕ್ಸಲರ ಹತ್ಯೆ ಮಾಡಿದೆ.

ಏಪ್ರಿಲ್ 19 ರಂದು ದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಗೂ ಮುನ್ನವೇ ಛತ್ತೀಸ್ ಗಢದ ಕಂಕೇರ್‌ನಲ್ಲಿ  ಭಾರೀ ಪ್ರಮಾಣದ ಎನ್ ಕೌಂಟರ್ ನಡೆದಿದೆ. ಪೊಲೀಸರು ಮತ್ತು ನಕ್ಸಲೀಯರ ನಡುವಿನ ಎನ್‌ಕೌಂಟರ್‌ನಲ್ಲಿ ಮೂವರು ಯೋಧರು ಗಾಯಗೊಂಡಿರುವ ಸುದ್ದಿ ಇದೆ. ಛೋಟೆ ಬೇಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾದ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯುತ್ತಿದ್ದು, ಗಾಯಗೊಂಡ ಸೈನಿಕರನ್ನು ಕಾಡಿನಿಂದ ಸ್ಥಳಾಂತರಿಸಲು ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ನಕ್ಸಲೀಯ ಕಮಾಂಡರ್ ಶಂಕರ್ ರಾವ್ ಕೂಡ ಹತರಾಗಿದ್ದಾರೆ, ಇದುವರೆಗೆ 18 ಮೃತದೇಹಗಳು ಪತ್ತೆಯಾಗಿದ್ದು, ಅಪಾರ ಸಂಖ್ಯೆಯ ಸ್ವಯಂಚಾಲಿತ ರೈಫಲ್‌ಗಳು ಪತ್ತೆಯಾಗಿವೆ. ಮಾಹಿತಿ ಪ್ರಕಾರ, ಈ ಎನ್‌ಕೌಂಟರ್‌ನಲ್ಲಿ 3 ಪೊಲೀಸರು ಗಾಯಗೊಂಡಿದ್ದಾರೆ.

Leave a Comment