ಐಪಿಎಲ್ : ಬಲಿಷ್ಠ ಡೆಲ್ಲಿಯನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಧೋನಿ ಪಡೆ.

Coastal Bulletin
ಐಪಿಎಲ್ : ಬಲಿಷ್ಠ ಡೆಲ್ಲಿಯನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಧೋನಿ ಪಡೆ.

ದುಬೈ : ಡೆಲ್ಲಿ ಹಾಗೂ ಚೆನ್ನೈ ನಡುವೆ ನಡೆದ ಕ್ವಾಲಿಫಯರ್ ಪಂದ್ಯದಲ್ಲಿ ಚೆನ್ನೈ ತಮ್ಮ ಅಮೋಘ ಆಟದಿಂದ ಫೈನಲ್ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು 172 ರನ್ ಕಲೆಹಾಕಿತು.ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ 6 ವಿಕೆಟ್‍ಗಳನ್ನು ಕಳೆದುಕೊಂಡು ಅಮೋಘ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದೆ.

ಡೆಲ್ಲಿ ಪರ ಪೃಥ್ವಿ ಶಾ 60, ರಿಷಬ್ ಪಂತ್ 51 ರನ್ ಗಳಿಸಿದರೆ ಚೆನ್ನೈ ಪರ ಗಾಯಕ್ ವಾಡ್ 70, ಉತ್ತಪ್ಪ 53, ಹಾಗೂ ನಾಯಕ ಧೋನಿ 18 ರನ್‌ಗಳನ್ನು ಗಳಿಸಿದರು.

Leave a Comment