Indian Railways: 'ಮಲ್ಟಿ ಟ್ರ್ಯಾಕಿಂಗ್' ಯೋಜನೆಗಳಿಗೆ ಕೇಂದ್ರ ಅನುಮೋದನೆ: ಲಾಭ ಪಡೆಯುವ ಆ 6 ರಾಜ್ಯಗಳು ಯಾವುವು ಗೊತ್ತೆ?

Coastal Bulletin
Indian Railways: 'ಮಲ್ಟಿ ಟ್ರ್ಯಾಕಿಂಗ್' ಯೋಜನೆಗಳಿಗೆ ಕೇಂದ್ರ ಅನುಮೋದನೆ: ಲಾಭ ಪಡೆಯುವ ಆ 6 ರಾಜ್ಯಗಳು ಯಾವುವು ಗೊತ್ತೆ?

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಗೆ ಕೋಟ್ಯಂತರ ರೂಪಾಯಿಯ 6 ಯೋಜನೆಗಳಿಗೆ ಗುರುವಾರ ಅನುಮೋದನೆ ನೀಡಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಒಟ್ಟು ಅಂದಾಜು 12,343 ಕೋಟಿ ರೂಪಾಯಿ ವೆಚ್ಚದ ಪ್ರಮುಖ ಆರು ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದೆ. ವಿಶೇಷವೆಂದರೆ ಈ ಯೋಜನೆಗಳಿಗೆ ಕೇಂದ್ರ ಸರ್ಕಾರವೇ ಸಂಪೂರ್ಣ ಅಂದರೆ ಶೇಕಡಾ 100 ರಷ್ಟು ಹಣ ಒದಗಿಸಲಿದೆ ಅಂತಲೂ ಮಾಹಿತಿ ಲಭ್ಯವಾಗಿದೆ.ರೈಲ್ವೆ ಸಚಿವಾಲಯದ ಪ್ರಕಾರ, ಮಲ್ಟಿ ಟ್ರ್ಯಾಕಿಂಗ್ ಯೋಜನೆ ಪ್ರಸ್ತಾವನೆಗಳನ್ನು ರೈಲ್ವೆ ಇಲಾಖೆ ಪ್ರಸ್ತಾಪಿಸಿದ್ದು, ಅದರ ಕಾರ್ಯಾಚರಣೆಯನ್ನು ಸರಾಗಗೊಳಿಸುವ ಮೂಲಕ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಭಾರತೀಯ ರೈಲ್ವೆ ಜಾಲ ವ್ಯಾಪ್ತಿಯಲ್ಲಿ ಅತ್ಯಧಿಕ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ಯೋಜಿಸಲಾಗಿದೆ.



ಭಾರತೀಯ ರೈಲ್ವೆಯ ಈ ಹೊಸ ಅರು ಯೋಜನೆಗಳು ಪ್ರಧಾನಮಂತ್ರಿ ಮೋದಿಯವರ ಹೊಸ ಭಾರತದ ಕಟ್ಟುವ ಕನಿಸಿನ ದೂರದೃಷ್ಟಿಗೆ ಅನುಗುಣವಾಗಿದೆ. ಯೋಜನೆ ಜಾರಿಯಾಗುವ ಆಯಾ ಪ್ರದೇಶದ ಜನರನ್ನು "ಆತ್ಮನಿರ್ಭರ್" ಮಾಡುವ ಮೂಲಕ ಆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಆಗಲಿದೆ. ಜೊತೆಗೆ ಉದ್ಯೋಗ/ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಯಾಗುತ್ತವೆ ಎಂದು ಕೇಂದ್ರ ತಿಳಿಸಿದೆ.

ಸದರಿ ಈ 6 ಯೋಜನೆಗಳು 6 ರಾಜ್ಯಗಳ 18 ಜಿಲ್ಲೆಗಳನ್ನು ಒಳಗೊಂಡು ಜಾರಿಗೆ ಪ್ರಸ್ತಾಪಗೊಂಡಂತಹ ಯೋಜನೆಗಳಾಗಿವೆ. 'ತೆಲಂಗಾಣ, ಗುಜರಾತ್, ರಾಜಸ್ಥಾನ, ಅಸ್ಸಾಂ, ಆಂಧ್ರಪ್ರದೇಶ ಹಾಗೂ ನಾಗಾಲ್ಯಾಂಡ್' ರಾಜ್ಯಗಳಲ್ಲಿ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವೂ ಈ ಯೋಜನೆಯಿಂದ ಸುಮಾರು 1020 ಕಿಲೋ ಮೀಟರ್‌ನಷ್ಟು ಹೆಚ್ಚಿಸುತ್ತವೆ. ಸುಮಾರು ಮೂರು ಕೋಟಿ ಮಾನವ ದಿನಗಳ ಉದ್ಯೋಗವನ್ನು ಒದಗಿಸುತ್ತವೆ ಎಂದು ಮಾಹಿತಿ ನೀಡಿದೆ.

ಈ 6 ಮಲ್ಟಿ ಟ್ರ್ಯಾಕಿಂಗ್ ಯೋಜನೆಗಳಿಗೆ ಸಂಪುಟ ಅನುಮೋದನ ನೀಡಿದ್ದರ ಫಲವಾಗಿ ಭವಿಷ್ಯದಲ್ಲಿ ಕೃಷಿ ಉತ್ಪನ್ನಗಳು, ಆಹಾರ ಧಾನ್ಯಗಳು, ಆಹಾರ ಸರಕುಗಳು, ಸಿಮೆಂಟ್, ಕಬ್ಬಿಣ, ರಸಗೊಬ್ಬರಗಳು, ಸುಣ್ಣದಕಲ್ಲು, ಪಿಒಎಲ್, ಕಲ್ಲಿದ್ದಲು, ಉಕ್ಕು, ಹಾರುಬೂದಿ, ಕ್ಲಿಂಕರ್, ಕಂಟೈನರ್ ಮುಂತಾದ ಸರಕುಗಳ ಸಾಗಣೆಗೆ ಈ ಮಾರ್ಗಗಳು ಮತ್ತಷ್ಟು ಉಪಯೋಗ ಒದಗಿಸಲಿವೆ. ಜೊತೆಗೆ ಹೆಚ್ಚುವರಿ ಸಾಗಾಣೆಗೂ ಈ ಯೋಜನೆ ಪೂರಕವಾಗಿವೆ.

Leave a Comment