ಬಹುಕೋಟಿ ಒಡೆಯ ರೇವಂತ್ ರೆಡ್ಡಿ ಇಂದು ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ.

Coastal Bulletin
ಬಹುಕೋಟಿ ಒಡೆಯ ರೇವಂತ್ ರೆಡ್ಡಿ ಇಂದು ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ.

ತೆಲಂಗಾಣ : ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಲ್ಪಾವಧಿಯಲ್ಲೇ ಕೋಟಿ ಕೋಟಿ ತೆಲುಗು ಜನರ ಮನ ಗೆದ್ದು ಉನ್ನತ ಸ್ಥಾನಕ್ಕೇರಿರುವ ರೇವಂತ್ ರೆಡ್ಡಿ ಅವರು ನಡೆದು ಬಂದ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿತ್ತು. ಅವರು ಸಿಎಂ ಸ್ಥಾನಕ್ಕೆ ಬರಲು ಎದುರಿಸಿದ ಸವಾಲುಗಳು, ಹೋರಾಟ, ಜೈಲು ಶಿಕ್ಷೆ ಹೀಗೆ ಹತ್ತಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಅಂತಿಮವಾಗಿ ರೇವಂತ್ ರೆಡ್ಡಿಯವರು ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾಗಿದ್ದಾರೆ.

2007ರಲ್ಲಿ ಮೆಹಬೂಬ ನಗರ ಜಿಲ್ಲೆಯಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಂದಿನ ಬಲಿಷ್ಠ ಕಾಂಗ್ರೆಸ್, ಟಿಡಿಪಿ, ಟಿಆರ್‌ಎಸ್ ಹಾಗೂ ಬಿಜೆಪಿಯಂತ ಪಕ್ಷಗಳ ಅಭ್ಯರ್ಥಿಗಳನ್ನೇ ಮಣಿಸಿ ಗೆದ್ದು ಬರುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸುತ್ತಾರೆ. ಅಷ್ಟೇ ಅಲ್ಲ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಾರೆ.

ಆ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರೇವಂತ್ ರೆಡ್ಡಿ ಎಎಂಎಲ್‌ಸಿ ಆಗಿ ಗೆಲುವನ್ನು ಕಾಣುತ್ತಾರೆ. ಅಂದಿನ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರು ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡುತ್ತಾರೆ. ಆದರೆ ಈ ವೈಎಸ್‌ಆರ್ ಅವರ ಆಹ್ವಾನವನ್ನು ನಯವಾಗಿ ತರಿಸ್ಕರಿಸಿ ಚಂದ್ರಬಾಬು ನೇತೃತ್ವದ ಟಿಡಿಪಿ ಸೇರುತ್ತಾರೆ.

2009ರಲ್ಲಿ ಕೊಡಂಗಲ್ ನಿಂದ ತೆಲುಗು ದೇಶಂ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರೇವಂತ್ ರೆಡ್ಡಿ ಅವರು ಕಾಂಗ್ರೆಸ್‌ ನಾಯಕ ಹಿರಿಯ ನಾಯಕ ರಾವುಲಪಲ್ಲಿ ಗುರ್ನಾಥ್ ರೆಡ್ಡಿ ಅವರನ್ನೇ ಮಣಿಸಿ ಕೈ ಪಕ್ಷಕ್ಕೆ ದೊಡ್ಡ ಅಚ್ಚರಿ ಮೂಡಿಸುತ್ತಾರೆ. ಅಲ್ಲದೆ, ವಿಧಾನಸಭೆಯನ್ನು ಪ್ರವೇಶಿಸುತ್ತಾರೆ.

ನಂತರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಅಂದರೆ 2014ರಲ್ಲಿ ಟಿಡಿಪಿ ಶಾಸಕರಾಗಿ ಗೆಲುವು ಕಂಡಿದ್ದ ರೇವತ್ ರೆಡ್ಡಿ ಅವರು 2017ರ ವರೆಗೆ ಟಿಡಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿದಿದ್ದರು. 2017ರ ಅಕ್ಟೋಬರ್‌ನಲ್ಲಿ ಟಿಡಿಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಾರೆ. ಕೈ ಪಕ್ಷವನ್ನು ಸೇರಿದ ಮೂರು ವರ್ಷಗಳ ಕಾಲ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಾ ಹೋರಾಟ ಮಾಡುತ್ತಾರೆ.

ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ರೇವಂತ್ ರೆಡ್ಡಿ ಒಟ್ಟು 30.04 ಕೋಟಿ ಆಸ್ತಿ ಹೊಂದಿದ್ದು, ಈ ಪೈಕಿ 5.17 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 24,87,87,500 ರೂ. ಸ್ಥಿರಾಸ್ತಿ ಹೊಂದಿದ್ದಾರೆ.

ರೆಡ್ಡಿ ಮತ್ತು ಅವರ ಪತ್ನಿ ಸಂಪತ್ತಿನಲ್ಲಿ ಪಾಲು ಹೊಂದಿದ್ದಾರೆ. ಅಫಿಡವಿಟ್ ಪ್ರಕಾರ, ಅವರ ಪತ್ನಿ ಹೊಂದಿರುವ ಸ್ಥಿರಾಸ್ತಿ 15,02,67,225 ರೂ., ಕಾಂಗ್ರೆಸ್ ನಾಯಕ 8,62,33,567 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಮುಂದಿನ ತೆಲಂಗಾಣ ಸಿಎಂ ಆಗಿರುವ ಅವರ ಚರ ಆಸ್ತಿ ಮೌಲ್ಯ 2,18,93,343 ಮತ್ತು ಅವರ ಪತ್ನಿ 2,92,68,008 ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ.

Leave a Comment