ಪಂಚರಾಜ್ಯ ಚುನಾವಣಾ ಫಲಿತಾಂಶ- ಮಧ್ಯಪ್ರದೇಶ,ರಾಜಸ್ಥಾನ ಗಳಲ್ಲಿ ಬಿಜೆಪಿ,ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ದಾಪುಗಾಲು. ಛತ್ತೀಸ್‍ಘಡ್ ನಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ.

Coastal Bulletin
ಪಂಚರಾಜ್ಯ ಚುನಾವಣಾ ಫಲಿತಾಂಶ- ಮಧ್ಯಪ್ರದೇಶ,ರಾಜಸ್ಥಾನ ಗಳಲ್ಲಿ ಬಿಜೆಪಿ,ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ದಾಪುಗಾಲು. ಛತ್ತೀಸ್‍ಘಡ್ ನಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ.

ಚುನಾವಣೆ ನಡೆದ 5 ರಾಜ್ಯಗಳ ಪೈಕಿ ಇಂದು 4 ರಾಜ್ಯಗಳಿಗೆ ಮಾತ್ರ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಮಿಜೋರಾಂ ರಾಜ್ಯದಲ್ಲಿ ನಾಳೆ ಮತಗಳ ಎಣಿಕೆಯಾಗಲಿದೆ. ಇಂದು ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಮಾತ್ರ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಕೆಲವೇ ಗಂಟೆಗಳಲ್ಲಿ ಯಾವ ರಾಜ್ಯ ಯಾರ ತೆಕ್ಕೆಗೆ ಎಂಬ ನಿರ್ಧಾರವಾಗಲಿದೆ.

ತೆಲಂಗಾಣದ ವಿಧಾನಸಭೆ ಚುನಾವಣೆ ಮತ ಎಣಿಕೆ 8 ಗಂಟೆಯಿಂದಲೇ ಆರಂಭವಾಗಿದ್ದು, ಎಕ್ಸಿಟ್‌ ಪೋಲ್‌ ಭವಿಷ್ಯದಂತೆ ಕಾಂಗ್ರೆಸ್‌ ಭಾರಿ ಮುನ್ನಡೆಯಲ್ಲಿದ್ದು, ಅಧಿಕಾರ ಹಿಡಿಯುವುದು ಬಹುತೇಕ ನಿಚ್ಚಳವಾಗಿದೆ.119 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 65 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕಾರ ಹಿಡಿಯಲು ಕನಿಷ್ಠ 60 ಸೀಟುಗಳು ಬೇಕಿದೆ.

ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆ 2023ರ ಮತ ಎಣಿಕೆ ನಡೆಯುತ್ತಿದೆ. ರಾಜ್ಯದ ಆಡಳಿತ

ಪಕ್ಷ ಬಿಜೆಪಿ 146 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ದಾಟಿದೆ.

ಛತ್ತೀಸ್‌ಗಢದಲ್ಲಿ 46 ಸೀಟ್​ಗಳ ಲೀಡ್​ನಲ್ಲಿ ಬಿಜೆಪಿ ಇದ್ದು ಕಾಂಗ್ರೆಸ್ 44 ಸ್ಥಾನ ಪಡೆದು ತೀವ್ರ ಪೈಪೋಟಿ ಏರ್ಪಟ್ಟಿದೆ.

ರಾಜಸ್ಥಾನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.ಮ್ಯಾಜಿಕ್ ನಂಬರ್ 100 ಅನ್ನು 118 ಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.ಕಾಂಗ್ರೆಸ್ 66 ರ ಸನಿಹ ಇದೆ.

Leave a Comment