10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇನ್ನುಮುಂದೆ ಸಿಗಲ್ಲ ಶೇಕಡಾವಾರು ಅಂಕಪಟ್ಟಿ! ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಮಹತ್ವದ ನಿರ್ಧಾರ.

Coastal Bulletin
10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇನ್ನುಮುಂದೆ ಸಿಗಲ್ಲ ಶೇಕಡಾವಾರು ಅಂಕಪಟ್ಟಿ! ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಮಹತ್ವದ ನಿರ್ಧಾರ.

ನವದೆಹಲಿ: ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೇಣಿ/ಡಿಸ್ಟಿಂಕ್ಷನ್‌/ಒಟ್ಟು ಶೇಕಡಾವಾರು ಅಂಕಗಳನ್ನು ತಿಳಿಸದೇ ಇರುವ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಕುರಿತು ಶುಕ್ರವಾರ ಅಧಿಕೃತ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

10 ಹಾಗೂ 12ನೇ ತರಗತಿಯ ವಿದ್ಯಾರ್ಥಿ ಐದಕ್ಕಿಂತ ಹೆಚ್ಚು ವಿಷಯಗಳನ್ನು ತೆಗೆದುಕೊಂಡಿದ್ದರೆ, ಆ ಪೈಕಿ ಯಾವ ಐದು ಅತ್ಯುತ್ತಮ ವಿಷಯಗಳನ್ನು ಪರಿಗಣಿಸಬೇಕು ಎಂದು ಇನ್ನು ಮುಂದೆ ಆತ/ಆಕೆ ಪ್ರವೇಶ ಪಡೆಯುವ ಉನ್ನತ ಶಿಕ್ಷಣ ಸಂಸ್ಥೆ ಅಥವಾ ಕೆಲಸ ನೀಡುವ ಸಂಸ್ಥೆಯೇ ನಿರ್ಧರಿಸಬೇಕಾಗುತ್ತದೆ. ಏಕೆಂದರೆ, ಸಿಬಿಎಸ್‌ಇ ಇನ್ನು ಮುಂದೆ ವಿದ್ಯಾರ್ಥಿಗಳ ಶೇಕಡಾವಾರು ಅಂಕವನ್ನು ಲೆಕ್ಕ ಹಾಕುವುದಿಲ್ಲ, ತಿಳಿಸುವುದಿಲ್ಲ ಅಥವಾ ಘೋಷಣೆಯನ್ನೂ ಮಾಡುವುದಿಲ್ಲ.

ಮುಂದೆ ಆ ವಿದ್ಯಾರ್ಥಿ ಪ್ರವೇಶ ಪಡೆಯುವ ಅಥವಾ ಉದ್ಯೋಗ ಪಡೆಯುವ ಸಂಸ್ಥೆಯವರೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಡಾ। ಸಾನ್ಯಂ ಭಾರದ್ವಾಜ್‌ ತಿಳಿಸಿದ್ದಾರೆ.

ಕಳೆದ ವರ್ಷ ಕೂಡ ಸಿಬಿಎಸ್‌ಇ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಮೆರಿಟ್‌ ಪಟ್ಟಿಯನ್ನು ಪ್ರಕಟಿಸಿರಲಿಲ್ಲ. ಹಾಗೆಯೇ ಟಾಪರ್‌ಗಳ ಹೆಸರನ್ನೂ ಘೋಷಿಸಿರಲಿಲ್ಲ. ವಿದ್ಯಾರ್ಥಿಗಳ ನಡುವೆ ಅನಾರೋಗ್ಯಕರ ಪೈಪೋಟಿ ತಪ್ಪಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.

Leave a Comment