ಕಾಸರಗೋಡು : 12 ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಿನ್ನ ಕೋಮಿನ ಜೋಡಿ ಶವವಾಗಿ ಪತ್ತೆಯಾಗಿದ್ದಾರೆ. ಕಾಸರಗೋಡಿನ ರಾಜಾಪುರಂ ಪೋಲಿಸ್ ಠಾಣಾ ವ್ಯಾಪ್ತಿಯ ಕಲ್ಹಾರ್ ನಿವಾಸಿ ಮೊಹಮ್ಮದ್ ಶರೀಫ್ ಮತ್ತು ಸಿಂಧು ಗುರುವಾಯೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಿಕ್ಷಾ ಚಾಲಕನಾಗಿದ್ದ ಇವನು ಈಗಾಗಲೇ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಸಿಂಧು ಕೂಡ ಗೃಹಿಣಿ, ಇಬ್ಬರು ಮಕ್ಕಳಿದ್ದಾರೆ. ಹಲವು ವರ್ಷಗಳಿಂದ ಮೊಹಮ್ಮದ್ ಶರೀಫ್ ಮತ್ತು ಸಿಂಧು ನಡುವೆ ಸ್ನೇಹ ಬೆಳೆದಿತ್ತು.
ಇಬ್ಬರು ನೆರೆಮನೆಯವರಾಗಿದ್ದರು. ಮೊಹಮ್ಮದ್ ಶರೀಫ್ ನ ರಿಕ್ಷಾದಲ್ಲಿ ಸಿಂಧು ಹೆಚ್ಚಾಗಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಗುರುವಾಯೂರಿನಲ್ಲಿರುವ ವಸತಿ ಗೃಹದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಪೋಲಿಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.