ಕಾನೂನು ಬಾಹಿರವಾಗಿ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಮಂಜೇಶ್ವರ ಶಾಸಕನಿಂದ ಆವಾಜ್!

Coastal Bulletin
ಕಾನೂನು ಬಾಹಿರವಾಗಿ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಮಂಜೇಶ್ವರ ಶಾಸಕನಿಂದ ಆವಾಜ್!

ಕಾಸರಗೋಡು : ಇಲ್ಲಿನ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಎಂಬವರು ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ದರ್ಪ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸರ ಮೇಲೆ ಮಂಜೇಶ್ವರ ಕಾಂಗ್ರೆಸ್ ಶಾಸಕನ ದರ್ಪ

ಜೋಡುಕಲ್ಲು ಎಂಬಲ್ಲಿ ಪೊಲೀಸರು ವಾಹನ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವ ತನ್ನ ಡ್ರೈವಿಂಗ್ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದ್ದನ್ನು ಪೊಲೀಸರು ಪ್ರಶ್ನಿಸಿದ್ದಾರೆ.ದಾರಿ ಮಧ್ಯೆ ಸಾಗುತ್ತಿದ್ದ ಶಾಸಕ ಅಶ್ರಫ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನವನ್ನು ಚಲಾಯಿಸುವಂತೆ ಮಾಡಿ ಪೊಲೀಸರನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಗದರಿಸಿರುವ ವಿಡಿಯೋ ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Leave a Comment