60ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ.

Coastal Bulletin
60ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ.

ಬೆಂಗಳೂರು : ಹಿರಿಯ ನಟ ಆಶಿಶ್‌ ವಿದ್ಯಾರ್ಥಿ ಅಸ್ಸಾಂ ಮೂಲದ ಫ್ಯಾಶನ್‌ ಸ್ಟೋರ್‌ ಒಡತಿ ರೂಪಾಲಿ ಬರುವಾ ಅವರನ್ನು ಸರಳ ಸಮಾರಂಭದಲ್ಲಿ ಗುರುವಾರ ವಿವಾಹವಾಗಿದ್ದಾರೆ. ರಿಜಿಸ್ಟರ್‌ ಮ್ಯಾರೇಜ್‌ನಲ್ಲಿ ಅವರ ಆಪ್ತ ಸ್ನೇಹಿತರು ಹಾಗೂ ಕುಟುಂಬದ ಕೆಲವೇ ವ್ಯಕ್ತಿಗಳು ಪಾಲ್ಗೊಂಡಿದ್ದರು. ಮದುವೆಯ ಬಳಿಕ ದಂಪತಿಗಳು ಸಂಜೆಯ ವೇಳೆಗೆ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದಾರೆ. ಆ ಮೂಲಕ ತಮ್ಮ ಹೊಸ ದಾಂಪತ್ಯವನ್ನು ಆರಂಭ ಮಾಡಿದ್ದಾರೆ. ಮದುವೆಯ ಕುರಿತಾಗಿ ಮಾತನಾಡಿರುವ 60 ವರ್ಷದ ಆಶಿಸ್‌ ವಿದ್ಯಾರ್ಥಿ. 'ನನ್ನ ಜೀವನದ ಈ ಹಂತದಲ್ಲಿ ರೂಪಾಲಿಯನ್ನು ಮದುವೆಯಾಗುತ್ತಿರುವುದು ಬಹಳ ಉತ್ತಮ ಫೀಲಿಂಗ್‌ ನೀಡುತ್ತಿದೆ. ಇಂದು ಬೆಳಿಗ್ಗೆಯಷ್ಟೇ ರಿಜಿಸ್ಟರ್‌ ಮ್ಯಾರೇಜ್‌ ಮಾಡಿಕೊಂಡಿದ್ದು, ಸಂಜೆಯ ಎಲ್ಲರಿಗೂ ಔತಣಕೂಟ ಏರ್ಪಡಿಸಿದ್ದೇವೆ. ಇದು ಕುಟುಂಬದ ಸಣ್ಣ ಕಾರ್ಯಕ್ರಮವಾಗಿರಬೇಕು ಎನ್ನುವುದು ನನ್ನ ಆಸೆಯಾಗಿತ್ತು. ನಾವಿಬ್ಬರು ಕೆಲ ಸಮಯದ ಹಿಂದಷ್ಟೇ ಭೇಟಿಯಾಗದ್ದೆವು. ಆತ್ಮೀಯತೆ ಬೆಳೆದ ಕಾರಣ ಮದುವೆಯಾಗಲು ನಿರ್ಧರಿಸಿದ್ದೆವು. ಇಬ್ಬರೂ ಕೂಡ ಮದುವೆ ಸಣ್ಣ ಪ್ರಮಾಣದಲ್ಲಿಯೇ ಆಗಬೇಕು ಎಂದು ಬಯಸಿದ್ದೆವು ಎಂದು ತಿಳಿಸಿದ್ದಾರೆ.

ಗುವಾಹಟಿ ಮೂಲದ ರೂಪಾಲಿ, ಕೋಲ್ಕತ್ತಾದಲ್ಲಿ ಫ್ಯಾಶನ್‌ ಸ್ಟೋರ್‌ ಇರಿಸಿಕೊಂಡಿದ್ದಾರೆ. ಆಶಿಶ್‌ ವಿದ್ಯಾರ್ಥಿಯನ್ನು ಸುಂದರ ವ್ಯಕ್ತಿ ಎಂದಿರುವ ಆಕೆ, ಅವರೊಂದಿಗೆ ಬದುಕು ಸುಂದರವಾಗಿರಲಿದೆ ಎನ್ನುವ ನಿರೀಕ್ಷೆ ಇದೆ ಎಂದಿದ್ದಾರೆ. 

11 ಭಾಷೆಗಳಲ್ಲಿ ಅಂದಾಜು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಆಶಿಶ್‌ ವಿದ್ಯಾರ್ಥಿ, ಕನ್ನಡದಲ್ಲಿ ಕೋಟಿಗೊಬ್ಬ, ನಂದಿ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು. ಅದರೊಂದಿಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲೀಷ್‌, ಒಡಿಯಾ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದಲ್ಲೂ ಅವರು ಪ್ರಖ್ಯಾತರಾಗಿದ್ದಾರೆ. 1986ರಲ್ಲಿ ತಮ್ಮ ಸಿನಿಮಾ ಜರ್ನಿ ಆರಂಭ ಮಾಡಿದ್ದ ಆಶಿಶ್ ವಿದ್ಯಾರ್ಥಿ ಪ್ರಮುಖ ಪಾತ್ರಗಳನ್ನು ನಿಭಾಯಿಸುವ ಮೂಲಕ ಗಮನಸೆಳೆದಿದ್ದರು.

Leave a Comment