ಬೆಂಜನಪದವು: ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ ಸಂಪನ್ನ. ಶ್ರೀ ಕ್ಷೇತ್ರವು ಹಿಂದೂ ಶಕ್ತಿ ಕೇಂದ್ರವಾಗಿ ಬೆಳಗಲಿ :ಅರುಣ್ ಕುಮಾರ್ ಪುತ್ತಿಲ.

Coastal Bulletin
ಬೆಂಜನಪದವು: ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ ಸಂಪನ್ನ. ಶ್ರೀ ಕ್ಷೇತ್ರವು ಹಿಂದೂ ಶಕ್ತಿ ಕೇಂದ್ರವಾಗಿ ಬೆಳಗಲಿ :ಅರುಣ್ ಕುಮಾರ್ ಪುತ್ತಿಲ.

ಬಂಟ್ವಾಳ :ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಶ್ರೀ ಭದ್ರಕಾಳಿ ಹಾಗೂ ಸಪರಿವಾರ ದೈವ ದೇವರುಗಳಿಗೆ ಬ್ರಹ್ಮ ಕಲಶಾಭಿಷೇಕವು ಕ್ಷೇತ್ರದ ತಂತ್ರಿಗಳಾದ ಲೋಕೇಶ್ ತಂತ್ರಿಗಳ ನೇತೃತ್ವದಲ್ಲಿ ಮೇ 24ರಂದು ಬುಧವಾರ ಸಂಭ್ರಮದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಭದ್ರಕಾಳಿ ದೇವರಿಗೆ ಅಷ್ಟೋತ್ತರ ಶತ ಸಹಿತ ಬ್ರಹ್ಮಕಲ ಶಾಭಿಷೇಕ ಗಣಪತಿ ಧರ್ಮಶಾಸ್ತ್ರ ದೇವರಿಗೆ ಬ್ರಹ್ಮಕಲಶಾಭಿಷೇಕ ಅಣ್ಣಪ್ಪ ಪಂಜುರ್ಲಿ ,ಧೂಮಾವತಿ ಬಂಟ ದೈವಗಳಿಗೆ ಕಲಶಾಭಿಷೇಕ ಶ್ರೀ ಕಲ್ಕುಡ- ಕಲ್ಲುರ್ಟಿ ,ಮಂತ್ರ ದೇವತೆ, ಗುಳಿಗೆ ಸಾನಿಧ್ಯ ಗಳಿಗೆ ನವಕಲಶಾಭಿಷೇಕ , ಅಮ್ಮನವರಿಗೆ ಪ್ರಸನ್ನ ಪೂಜೆ ನೆರವೇರಿತು.


ಬೆಳಿಗ್ಗೆ ಗಣಪತಿ ಹೋಮ,ಮಧ್ಯಾಹ್ನ ಮಹಾಪೂಜೆ, ಅಮ್ಮನವರಿಗೆ ದರ್ಶನ ಸೇವೆ ಭಜನೆ, ಪಲ್ಲಪೂಜೆ ,ಪ್ರಸಾದ ವಿತರಣೆ, ಸಂಜೆ ದುರ್ಗಾ ನಮಸ್ಕಾರ ಪೂಜೆ ,ರಾತ್ರಿ ಮಹಾಪೂಜೆ, ಬಲಿ ಉತ್ಸವ ನೆರವೇರಿತು .ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಜಗದೀಶ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ ನೆರವೇರಿತು.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು ಬಳಿಕ ಮಾತನಾಡಿ ಹಿಂದೂ ಶ್ರದ್ದಾ ಕೇಂದ್ರವಾಗಿ, ಶಕ್ತಿ ಕೇಂದ್ರ ವಾಗಿ,ಹಿಂದುತ್ವದ ದೊಡ್ಡ ಶಕ್ತಿಯಾಗಿ ಕ್ಷೇತ್ರ ಬೆಳಗಲಿದೆ ಎಂದರು .ಅವರನ್ನು ಗೌರವಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಕಿಶೋರ್ ಕುಮಾರ್ ದಂಡಕೇರಿ, ಪುನಃ ನಿರ್ಮಾಣ ಸಮಿತಿ ಅಧ್ಯಕ್ಷ ಕೆ ಪಿ ಶೆಟ್ಟಿ , ಕಾರ್ಯಧ್ಯಕ್ಷ ಉಮೇಶ್ ಸಾಲಿಯನ್ ಬೆಂಜನಪದವು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ,ಪ್ರಧಾನ ಕಾರ್ಯದರ್ಶಿ ಬಿ ಜನಾರ್ಧನ ಅಮ್ಮುಂಜೆ, ಭದ್ರಕಾಳಿ ಸೇವಾ ಸಮಿತಿ ಧರ್ಮದರ್ಶಿ, ರಮೇಶ್ ಬಿ ಬೆಂಜನಪದವು ಗೌರವಧ್ಯಕ್ಷ ಈಶ್ವರ ಬೆಲ್ಚಡ ಬೆಂಜನಪದವು, ಉಪಾಧ್ಯಕ್ಷ ಬಾಬು ಕೊಟ್ಟಾರಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸುವರ್ಣ ಬಡ ಕಬೈಲ್, ಪ್ರಧಾನ ಸಂಚಾಲಕ ಟಿ . ತಾರನಾಥ ಕೊಟ್ಟಾ ರಿ ಪ್ರಧಾನ ಕಾರ್ಯದರ್ಶಿ ಪ್ರವೀನ್,ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಅಪಾರ ಭಾಗವದ್ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.

Leave a Comment