ಫರಂಗಿಪೇಟೆ: ಅಭಿವೃದ್ಧಿ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಬಿಜೆಪಿಗೆ ಮತ ಹಾಕಿ: ಅಣ್ಣಾಮಲೈ.

Coastal Bulletin
ಫರಂಗಿಪೇಟೆ: ಅಭಿವೃದ್ಧಿ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಬಿಜೆಪಿಗೆ ಮತ ಹಾಕಿ: ಅಣ್ಣಾಮಲೈ.

ಬಂಟ್ವಾಳ: ತಮಿಳುನಾಡಿನ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಎ.23ರಂದು ಮಧ್ಯಾಹ್ನ ಫರಂಗಿಪೇಟೆಯಲ್ಲಿ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಮತಯಾಚನೆ ನಡೆಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಉಡುಪಿಗೆ ವಾಪಸು ಹೋಗುವ ವೇಳೆ ಫರಂಗಿಪೇಟೆಯಲ್ಲಿ ಮಂಗಳೂರು ಮಂಡಲದ ಪುದು ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರು ಸ್ವಾಗತಿಸಿದರು.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ, ಅವರು ಕೋಮು ಸೂಕ್ಮವಾದ ದ.ಕ.ಜಿಲ್ಲೆಯಲ್ಲಿ ಅಭಿವೃದ್ಧಿಯ ಜೊತೆಯಲ್ಲಿ ಸಂಸ್ಕೃತಿಯ ಉಳಿವಿಗಾಗಿ ದೇಶವನ್ನು ಕಾಯುವ ಸೈನಿಕ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಕಳೆದ ಬಾರಿ ಶೇ. 80 ರಷ್ಟು ಮತದಾನವಾಗಿದ್ದು, ಈ ಬಾರಿ ಅದನ್ನು ಮೀರಿಸುವ ರೀತಿಯಲ್ಲಿ ಹೆಚ್ಚು ಮತದಾನ ಮಾಡಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸೆಕೆಯ ಪ್ರಮಾಣ ಅತೀಯಾಗಿದೆಯಾದರೂ ಕಾರ್ಯಕರ್ತರು ಬಿಸಿಲಿನ್ನು ಲೆಕ್ಕಿಸದೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಶಕ್ತಿ ನೀಡುವಂತೆ ಅವರು ತಿಳಿಸಿದರು.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಜಿಲ್ಲಾ ಕಾರ್ಯದರ್ಶಿ ಮಂಡಲದ ಸಂಘಟನಾ ಪ್ರಭಾರಿ ದಿನೇಶ್ ಅಮ್ಟೂರು, ಸಂಚಾಲಕ ಚಂದ್ರಹಾಸ ಪಂಡಿತ್ ಹೌಸ್ , ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು,ಸುಜಿತ್ ಮಾಡೂರು, ಹಿಂದುಳಿದ ಮೊರ್ಚಾದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪುದು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಪ್ರಮುಖರಾದ ಜಯಶ್ರೀ ಕರ್ಕೇರ, ಸಂತೋಷ್ ಕುಮಾರ್ ರೈ ಬೋಳಿಯಾರ್, ಸುಕೇಶ್ ಶೆಟ್ಟಿ ತೇವು, ಮನೋಜ್ ಆಚಾರ್ಯ ನಾಣ್ಯ, ಕರೀಂ ಉಚ್ಚಿಲ,ಸುಮನಾ ಹರೀಶ್ ಶೆಟ್ಟಿ, ಶಾಂತ ಚೌಟ, ಮುರಳಿ ಕೋಣಾಜೆ, ಸುಮಲತ ಕೋಣಾಜೆ, ಶೈಲಜಾ ಪಿ.ಶೆಟ್ಟಿ, ಯಶವಂತ ಅಮೀನ್, ಚಂದ್ರಹಾಸ ಉಚ್ಚಿಲ್, ಹೇಮಂತ್ ಶೆಟ್ಟಿ, ಹರಿಣಿ ವಿ.ತಾರಾನಾಥ ಕೊಟ್ಟಾರಿ,ಪದ್ಮನಾಭ ಗಟ್ಟಿ, ಆರ್.ಸಿ.ನಾರಾಯಣ, ಧನಂಜಯ ಕಲ್ಲಡ್ಕ,ವಿಠಲ ಸಾಲಿಯಾನ್,ದಿನೇಶ್ ಶೆಟ್ಟಿ ಕೊಟ್ಟಿಂಜ, ಜಗನ್ನಾಥ್ ಸಾಲ್ಯಾನ್ ತುಂಬೆ,ಸುಕೇಶ್ ಶೆಟ್ಟಿ ತೇವು ದಿನೇಶ್ ಶೆಟ್ಟಿ ,ನವೀನ್ ಪಾಂಗಲ್ಪಾಡಿ, ಮತ್ತಿತರರು ಉಪಸ್ಥಿತರಿದ್ದರು.

Leave a Comment