ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಿಂಬದಿ ತೀರಾ ಬರಿದುಗೊಂಡ ನೇತ್ರಾವತಿ ನದಿಯಲ್ಲಿ ಇದೇ ಪ್ರಥಮ ಬಾರಿಗೆ ಬಂಡೆ ಕಲ್ಲಿನಲ್ಲಿ ವಿವಿಧ ಆಕೃತಿಯ ವಿಗ್ರಹ ಮತ್ತು ಕೆತ್ತನೆಗಳು ಪತ್ತೆಯಾಗಿ ನಾಗರಿಕರಲ್ಲಿ ಕುತೂಹಲ ಮೂಡಿಸಿದೆ.
ಬಂಡೆ ಕಲ್ಲುಗಳ ಮೇಲೆ ಶಿವ, ನಂದಿ, ಪಾದ, ಪಾಣಿಪೀಠ, ಚೆನ್ನೆಮಣೆ, ಊಟದ ಬಟ್ಟಲು, ಜಡೆ, ಸೂರ್ಯ ಚಂದ್ರ, ತಾವರೆ, ಸುರಂಗ ಮತ್ತಿತರ ಕೆತ್ತನೆಗಳು ಕಾಣಿಸಿಕೊಂಡು ಜನರ ಗಮನ ಸೆಳೆದಿದೆ.
ನಾವು ಬಾಲ್ಯದಲ್ಲಿ ಬೇಸಿಗೆ ವೇಳೆ ನದಿಯಲ್ಲಿ ಆಟವಾಡುವಾಗ ಇದನ್ನು 'ಸೀತಾ ಪಾದ' ಎನ್ನುತ್ತಿದ್ದು, ಋಷಿಮುನಿಗಳು ತಪ್ಪಸ್ಸು ನಡೆಸುವ ಸಂದರ್ಭದಲ್ಲಿ ಇಂತಹ ಕೆತ್ತನೆ ರಚಿಸಿ ದೇವರನ್ನು ಆರಾಧಿಸಿರಬಹುದು ಎಂದು ಪುರಸಭೆ ಹಿಇಯ ಸದಸ್ಯ ಎ.ಗೋವಿಂದ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತಿಹಾಸ ತಜ್ಞರು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಲ್ಲಿ ಮಾತ್ರ ಹೆಚ್ಚಿನ ಮಾಹಿತಿ ತಿಳಿದು ಬರಬಹುದು ಎಂದಿದ್ದಾರೆ.
ಕಳೆದ ಹಲವಾರು ವರ್ಷಗಳ ಬಳಿಕ ನೇತ್ರಾವತಿ ನದಿಯಲ್ಲಿ ನೀಉ ಬರಿದುಗೊಂಡ ಪರಿಣಾಮ ಇಂತಹ ಕಲಾಕೃತಿಗಳು ಹೊರ ಜಗತ್ತಿಗೆ ಕಾಣಿಸಿಕೊಂಡಿದೆ ಎನ್ನುತ್ತಾರೆ ಸ್ಥಳೀಯರು.