ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಗೆಲುವು ಖಚಿತ. ಸುಳ್ಳು ಪ್ರಣಾಳಿಕೆ ಇಲ್ಲ, ಜಾತಿಗಣತಿ ಅಗತ್ಯ: ಮಾಜಿ ಸಚಿವ ರೈ ಹೇಳಿಕೆ.

Coastal Bulletin
ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಗೆಲುವು ಖಚಿತ. ಸುಳ್ಳು ಪ್ರಣಾಳಿಕೆ ಇಲ್ಲ, ಜಾತಿಗಣತಿ ಅಗತ್ಯ: ಮಾಜಿ ಸಚಿವ ರೈ ಹೇಳಿಕೆ.

ಬಂಟ್ವಾಳ:ಈ ಜಿಲ್ಲೆಯಲ್ಲಿ ಮಾಜಿ ಲೋಕಸಭಾ ಸದಸ್ಯರಾಗಿದ್ದ ದಿವಂಗತ ಶ್ರೀನಿವಾಸ ಮಲ್ಯ ಮತ್ತು ದಿವಂಗತ ಟಿ.ಎ.ಪೈ ಸೇರಿದಂತೆ ಆಸ್ಕರ್ ಫೆನರ್ಾಂಡಿಸ್ ಹಾಗೂ ಬಿ.ಜನಾರ್ದನ ಪೂಜಾರಿ ಅವಧಿಯಲ್ಲಿ ಕೈಗಾರಿಗಳ ಸ್ಥಾಪನೆ ಮತ್ತು ಹೆದ್ದಾರಿ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಅ ಬಳಿಕ ಬಂದ ಸಂಸದರಿಂದ ಇಂತಹ ಗಮನಾರ್ಹ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ 'ಗ್ಯಾರಂಟಿ' ಯೋಜನೆಗಳ ಬಗ್ಗೆ ಬಿಜೆಪಿ 'ಸುಳ್ಳು ಗ್ಯಾರಂಟಿ' ಎಂದು ಟೀಕಿಸಿತ್ತು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರ ಕಳೆದ ಒಂದು ವರ್ಷದಿಂದ ಮಹಿಳೆಯರಿಗೆ ನೀಡುತ್ತಿರುವ 'ಗೃಹಲಕ್ಷ್ಮಿ' ಮತ್ತು ಉಚಿತ ಬಸ್ ಪ್ರಯಾಣ 'ಶಕ್ತಿ' ಯೋಜನೆಗಳ ಬಗ್ಗೆ ಮಹಿಳೆಯರಲ್ಲಿ ಸಂತೃಪ್ತಿ ಇದೆ. ಇದರಿಂದಾಗಿ ಈ ಬಾರಿ ಮತಯಾಚನೆ ವೇಳೆ ಮಹಿಳೆಯರು ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ ರೂ 1ಲಕ್ಷ ಸೇರಿದಂತೆ ಯುವ ಪದವೀದರರಿಗೆ ಯುವನಿಧಿ,

ರೈತರ ಸಾಲಮನ್ನಾ ಮಾಡಲಿದ್ದು, ಕಾಂಗ್ರೆಸ್ ಎಂದಿಗೂ ಸುಳ್ಳು ಪ್ರಣಾಳಿಕೆ ಮಾಡಿಲ್ಲ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 400 ಸ್ಥಾನ ಗೆಲ್ಲುವುದಾಗಿ ಸುಳ್ಳು ಹೇಳುತ್ತಿದ್ದು, ಕಾಂಗ್ರೆಸ್ ಅವಧಿಯಲ್ಲಿ ಆರಂಭಗೊಂಡಿದ್ದ ಹಲವಾರು ಸಕರ್ಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ್ದಾರೆ ಎಂದು ಆರೋಪಿಸಿದರು.

ಈ ಜಿಲ್ಲೆಯಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಅವಕಾಶ ವಂಚಿತ ಹಿಂದುಳಿದ ವರ್ಗ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದಕ್ಕಾಗಿ ಜಾತಿಗಣತಿ ಅಗತ್ಯವಿದೆ ಎಂದು ಅವರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಶಬೀರ್ ಸಿದ್ಧಕಟ್ಟೆ ಮತ್ತಿತರರು ಇದ್ದರು.

Leave a Comment