ಕಲ್ಲಡ್ಕ: ಬಿಜೆಪಿ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ‌ಚೌಟ ಪರ ಬಹಿರಂಗ ಪ್ರಚಾರ ಸಭೆ.

Coastal Bulletin
ಕಲ್ಲಡ್ಕ: ಬಿಜೆಪಿ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ‌ಚೌಟ ಪರ ಬಹಿರಂಗ ಪ್ರಚಾರ ಸಭೆ.

ಬಂಟ್ವಾಳ :ಹಿಂದುತ್ಬದ ,ರಾಷ್ಟ್ರೀಯತೆಯ ಪರವಾಗಿರುವ ನರೇಂದ್ರ ಮೋದಿ ಮತ್ತು ದೇಶದ್ರೋಹಿಗಳ ನಡುವೆ ನಡೆಯುವ ಚುನಾವಣೆ ಇದಾಗಿದ್ದು, ಹಿಂದೂ ಸಮಾಜ ಗೌರವದಿಂದ ಬದುಕಲು ನಿರ್ಭೀತ ಸಮಾಜ ನಿರ್ಮಾಣಕ್ಕೆ ಬಿಜೆಪಿಗೆ ಮತನೀಡಿ ಎಂದು ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ‌ಚೌಟ ತಿಳಿಸಿದರು. ಅವರು ಕಲ್ಲಡ್ಕದಲ್ಲಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಬೇಕಾದರೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಬೇಕಾಗಿದೆ.

ನವದುರ್ಗೆಯರನ್ನು ಆರಾಧನೆ ಮಾಡುವ ನರೇಂದ್ರ ಮೋದಿಗೆ ಎ. 26 ರಂದು ನಡೆಯುವ ಚುನಾವಣೆಯಲ್ಲಿ ಮತಯಂತ್ರ ಆರಂಭವಾಗುವ ವೇಳೆ ನವ ದುರ್ಗೆಯರಂತೆ ಒಂಬತ್ತು ಮಹಿಳೆಯರು ಮತಹಾಕುವ ಮೂಲಕ ದೇಶ ಕಾಯುವ ಮೋದಿಯವರ ಕೈಯನ್ನು ಬಲಪಡಿಬೇಕು ಎಂದು‌ ಮನವಿ ಮಾಡಿದರು.

ಭಾರತ ಮಾತೆಗೆ ಜೈಕಾರ ಹಾಕಲು ಕಾಂಗ್ರೇಸ್ ನಾಯಕರ ಪರವಾನಗಿ ಬೇಕು ಎಂದಾದರೆ ಕಾಂಗ್ರೇಸ್ ನ ಮಾನಸಿಕತೆಯ ಬಗ್ಗೆ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕಾಗಿದೆ. ಇಂತಹವರ ಕೈಯಲ್ಲಿ ದೇಶದ ಭದ್ರತೆಯನ್ನು ಕಾಣಲು ಸಾಧ್ಯವಾ? ಎಂದು ಪ್ರಶ್ನಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿದರು.ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ ಆರ್ ಕೋಟ್ಯಾನ್,ಮಾಜಿ ಸಚಿವ ನಾಗರಾಜ ಶೆಟ್ಟಿ,ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಒಳಚರಂಡಿ ಮತ್ತು ನಗರ ,ನೀರು ನೈರ್ಮಲ್ಯ ನಿಗಮದ ಮಾಜಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ತಾ.ಪಂ.ಮಾಜಿ ಸದಸ್ಯ ಮಾದವ ಮಾವೆ, ಚುನಾವಣಾ ಪ್ರಭಾರಿಗಳಾದ ಪೂಜಾ ಪೈ,ಜಗದೀಶ್ ಶೇಣವ, ಜಿಲ್ಲಾ ಕಾರ್ಯದರ್ಶಿ ದೇವಪ್ಪ‌ ಪೂಜಾರಿ ಉಪಸ್ಥಿತರಿದ್ದರು.

Leave a Comment