ನರಿಕೊಂಬು: ಹನುಮಾನ್ ಮಂದಿರ ಲೋಕಾರ್ಪಣೆ ಧಾರ್ಮಿಕ ಸಭೆ. ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಸಿಗಬೇಕು: ಮಾಣಿಲ ಶ್ರೀ.

Coastal Bulletin
ನರಿಕೊಂಬು: ಹನುಮಾನ್ ಮಂದಿರ ಲೋಕಾರ್ಪಣೆ ಧಾರ್ಮಿಕ ಸಭೆ. ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಸಿಗಬೇಕು: ಮಾಣಿಲ ಶ್ರೀ.

ಬಂಟ್ವಾಳ:ದೇವರು - ದೇವಸ್ಥಾನ ಗಳ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾ ಕಲಶಾಭಿಷೇಕ ಭಕ್ತರ ಸಂಘಟನೆ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಪೂರಕವಾಗಿದ್ದು, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ ಸಿಗಬೇಕು ಎಂದು ಮಾಣಿಲ ಶ್ತೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ನರಿಕೊಂಬು ಗ್ರಾಮದ ವಿದ್ಯಾನಗರದಲ್ಲಿ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಪ್ರಯುಕ್ತ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ಚನ ನೀಡಿದರು.

ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಘದ ಅಧ್ಯಕ್ಷ ಕೆ.ಜಯಂತ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲ ಅಶ್ವನಿಕುಮಾರ್ ರೈ, ಉದ್ಯಮಿ ಉಮೇಶ ಬೋಳಂತೂರು, ಡಾ.ಸುಬ್ರಹ್ಮಣ್ಯ ಭಟ್ ಮೊಗರ್ನಾಡು, ಡಾ.ರಾಜೇಂದ್ರ ಪಡಿಯಾರ್, ಪ್ರವೇಶ್ ಮಂಜೇಶ್ವರ ಶುಭ ಹಾರೈಸಿದರು.

ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನ ಅಧ್ಯಕ್ಷ ವಿಶ್ವನಾಥ ಪೂಜಾರಿ, ಪಾಣೆಮಂಗಳೂರು ಶ್ರೀ ಸತ್ಯದೇವತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಿತ್ಯಾನಂದ ಸಪಲ್ಯ, ಉದ್ಯಮಿ ನವೀನ್ ಕೋಟ್ಯಾನ್ ಬಿ.ಸಿ.ರೋಡು, ಉಮೇಶ ನೆಲ್ಲಿಗುಡ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ಮೊಗರ್ನಾಡು, ಮಹಿಳಾ ಸಮಿತಿ ಅಧ್ಯಕ್ಷೆ ಹೇಮಲತಾ ಸಾಲಿಯಾನ್, ನವಜೀವನ ವ್ಯಾಯಾಮ ಶಾಲೆ ಅಧ್ಯಕ್ಚ ಶರತ್ ಎಚ್. ಮತ್ತಿತರರು ಇದ್ದರು.

ನಿವೃತ್ತ ಶಿಕ್ಷಕ ಬಾಲಕೃಷ್ಣ ಮಾಸ್ಟರ್ ಸ್ವಾಗತಿಸಿ, ಮಹಿಳಾ ಸಮಿತಿ ಸದಸ್ಯೆ ಮನೋಲ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Leave a Comment