Coastal Bulletin

ಮಂಗಳೂರು: ವ್ಯಾವಹಾರಿಕ, ಸ್ಪರ್ದಾತ್ಮಕ ವಾತಾವರಣದ ನಡುವೆಯೂ ಶತಮಾನದಿಂದ ಕೌಟುಂಬಿಕ ಪ್ರೀತಿ, ಆತ್ಮೀಯತೆಯಿಂದ ಶಿಕ್ಷಣರಂಗಕ್ಕೆ ಮೀಸಲಾದ ಸ್ಕೂಲ್ ಬುಕ್ ಕಂಪೆನಿ ಗುಣಮಟ್ಟದ ಉತ್ಪನ್ನ ಮತ್ತು ವಿಶ್ವಾಸಾರ್ಹ ಸೇವೆಯಿಂದ ನಾಡಿನ ಪ್ರಸಿದ್ಧ ಉದ್ಯಮವಾಗಿ ಬೆಳೆದಿದೆ. ಬದ್ಧತೆ ಮತ್ತು ಪರಿಶ್ರಮದಿಂದ ಶತಮಾನದ ಯಶಸ್ಸು ಕಂಡಿದೆ ಎಂದು ನಿಟ್ಟೆ ವಿಶ್ವ ವಿದ್ಯಾಲಯದ ಕುಲಾಧಿಪತಿ ಎನ್ ವಿನಯ ಹೆಗ್ಡೆ ಹೇಳಿದರು. ನಗರದ ಟಿ.ಎಂ.ಎ.ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಶನಿವಾರ ಸಂಜೆ ನಡೆದ ಮಂಗಳೂರಿನ ಸ್ಳೂಲ್ ಬುಕ್ ಕಂಪೆನಿ (ಎಸ್ಬಿಸಿ) ಶತಮಾನೋತ್ಸವ ಸಂಭ್ರಮ ವರ್ಣರಂಜಿತ ಸಮಾರಂಭವನ್ನು ಅವರು ದೀಪ ಪ್ರಜ್ವಲನದೊಂದಿಗೆ ಉಧ್ಘಾಟಿಸಿ ಮಾತನಾಡಿದರು.

ಅತಿಥಿಯಾಗಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಶಿಸ್ತು ಶ್ರಮದ ಮೌಲ್ಯಾಧಾರಿತ ಸೇವೆ ನೀಡುವ ಮೂಲಕ ಸ್ಳೂಲ್ ಬುಕ್ ಕಂಪೆನಿ ಸವಾಲುಗಳನ್ನು ಮೀರಿ ಬೆಳೆದು ಅವಿಭಜಿತ ದ.ಕ ಜಿಲ್ಲೆಗೆ ಗೌರವ ತಂದಿದೆ ಎಂದರು. ಕನರ್ಾಟಕ ಬ್ಯಾಂಕಿನ ಮುಖ್ಯ ವ್ಯವಹಾರಾಧಿಕಾರಿ ಗೋಕುಲ್ ದಾಸ್ ಪೈ ಮಾತನಾಡಿ ವಾಣಿಜ್ಯ ಧ್ಯೇಯ, ನಾವಿನ್ಯತೆಗೆ ಸ್ಪಂದನ, ಗ್ರಾಹಕ ವಿತರಕರ ನಡುವೆ ನಿಕಟ ಬಾಂಧವ್ಯ, ಉದ್ಯೋಗಿಗಳ ದೀಘರ್ಾವಧಿ ಸಾಂಗತ್ಯ, ಸಮಾಜಮುಖಿ ನಿಲುವುಗಳಿಂದ ಉದ್ಯಮ ಯಶಸ್ಸು ಕಾಣುವುದಕ್ಕೆ ಸ್ಳೂಲ್ ಬುಕ್ ಕಂಪೆನಿ ಉತ್ತಮ ನಿದರ್ಶನ. ಕಂಪೆನಿಗಳ ಜೀವಿತಾವಧಿ ಗಣನೀಯವಾಗಿ ಇಳಿಮುಖವಾಗಿರುವ ವಾತಾವರಣದಲ್ಲಿ ಸ್ಳೂಲ್ ಬುಕ್ ಕಂಪೆನಿ ಶತಮಾನ ದಾಟಿ ಮುನ್ನಡೆದಿದೆ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ ವಿದ್ಯಾಥರ್ಿ ಸಮೂಹದೊಂದಿಗೆ ಶಾಸಕ ಸ್ಳೂಲ್ ಬುಕ್ ಕಂಪೆನಿ ಭಾವನಾತ್ಮ ಸಂಬಂಧ ಹೊಂದಿದ್ದು ಪಡೆದಿರುವುದನ್ನು ಸಮಾಜಕ್ಕೆ ಮರಳಿ ಕೊಡುತ್ತಿದೆ ಎಂದರು. ಮನ ವಚನ ಕರ್ಮದಲ್ಲಿ ಏಕತೆಯಿಂದ ಸ್ಳೂಲ್ ಬುಕ್ ಕಂಪೆನಿ ಅವಿಭಜಿತ ದ.ಕ ಜಿಲ್ಲೆಯ ಟಾಪ್ಟೆನ್ನಲ್ಲಿ ಗುರುತಿಸಿಕೊಂಡಿದೆ. ಎಂದು ಎಕ್ಸ್ಪಟರ್್ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ನುಡಿದರು.

ಮಂಗಳೂರು ಐಸಿಎಐ ನಿಕಟಪೂರ್ವ ಅಧ್ಯಕ್ಷ ಸಿ.ಎ ಎಸ್.ಎಸ್. ನಾಯಕ್ ಮಾತನಾಡಿ ಸ್ಕೂಲ್ ಬುಕ್ ಕಂಪೆನಿ ಅವಿಭಜಿತ ದ.ಕ ,ಕೇರಳದಲ್ಲೂ ನೂರ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.

ಸ್ಕೂಲ್ ಬುಕ್ ಕಂಪೆನಿಯ ಪಿ.ಗಣೇಶ ಭಂಡಾರಿ, ಪಿ. ಸುನಿಲ್ ಭಂಡಾರಿ,ಪಿ. ಸೂರಜ್ ಭಂಡಾರಿ, ನಿಖಿಲ್ ಭಂಡಾರಿ, ಶ್ರೇಯಸ್ ಭಂಡಾರಿ ಉಪಸ್ಥಿತರಿದ್ದರು.

ಪಿ.ಆಶ್ರಯ ಭಂಡಾರಿ ರಚನಾ ಭಂಡಾರಿ ಸ್ಕೂಲ್ ಬುಕ್ ಕಂಪೆನಿಯ ಶತಮಾನದ ಹಾದಿಯ ಸಾಕ್ಷ್ಯಚಿತ್ರವನ್ನು ನಿರೂಪಿಸಿದರು. ರಂಜನ್ ಬಳಗದ ಲಘು ಸಂಗೀತ ಜರಗಿತು.ಮಧು ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ ಭಂಡಾರಿ ಪ್ರಾರ್ಥಿಸಿದರು. ಪಿ. ರಾಮಚಂದ್ರ ಭಂಡಾರಿ ಮತ್ತು ಯೋಗಿನಿ ಭಂಡಾರಿ ಸ್ವಾಗತಿಸಿದರು. ಪಿ.ನೀರಜ್ ಭಂಡಾರಿ ವಂದಿಸಿದರು. ಕು. ನಿಧಿ ಭಂಡಾರಿ ಅವರ ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಕೊನೆಗೊಂಡಿತು. ಕಲ್ಲಡ್ಕ ಪ್ರಭಾಕರ ಭಟ್ , ಮಾಜಿ ಸಚಿವ ನಾಗರಾಜ ಶೆಟ್ಟಿ, ಬಿ.ರಮಾನಾಥ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸ್ಕೂಲ್ ಬುಕ್ ಕಂಪೆನಿಯ ಶತಮಾನೋತ್ಸವ ಸವಿನೆನಪಿಗಾಗಿ ವಿಶೇಷ ಅಂಚೆ ಚೀಟಿ, ಕವರ್, ಸಿಬ್ಬಂದಿಗಳಿಗೆ ಗೌರವಾರ್ಪಣೆ, ಸ್ವಾತಂತ್ರ್ಯದ ಅಮೃತಮಹೋತ್ಸವ ಸವಿನೆನಪಿಗಾಗಿ ಆಜಾದಿ ವಿಶೇಷ ವಿನ್ಯಾಸದ ಪರಿಸರ ಸ್ನೇಹಿ ಪುಸ್ತಕಗಳ ಅನಾವರಣ ನಡೆಯಿತು. ಮಂಗಳಾ ಸೇವಾ ಸಮಿತಿ ಟ್ರಸ್ಟ್ಗೆ 100 ಸ್ಟೇಶನರಿ ಕಿಟ್ ವಿತರಿಸಲಾಯಿತು. ಸ್ಕೂಲ್ ಬುಕ್ ಕಂಪೆನಿಯ ಸಿಬ್ಬಂದಿವರ್ಗದ ಪರಿವಾರ, ವ್ಯಾವಹಾರಿಕ ಬಂಧುವರ್ಗ ಈ ಭಾವನಾತ್ಮಕ ಸಮಾರಂಭಕ್ಕೆ ಸಾಕ್ಷಿಯಾಗಿ ಸಹಭೋಜನದೊಂದಿಗೆ ಕೊನೆಗೊಂಡಿತು. ಸ್ಥಾಪಕ ಪಣಂಬೂರು ಚೆರ್ಡಪ್ಪ ಭಂಡಾರಿ ಅವರು ಹುಟ್ಟುಹಾಕಿದ ಸ್ಕೂಲ್ ಬುಕ್ ಕಂಪೆನಿಯನ್ನು ನಾಲ್ಕು ತಲೆಮಾರುಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಭಂಡಾರಿ ಕುಟುಂಬವರ್ಗದ ಎಲ್ಲ ಸದಸ್ಯರು ಶತಮಾನೋತ್ಸವ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Leave a Comment