ಬಿ.ಸಿ.ರೋಡ್ :ಶ್ರೀ ಕುಂಭೋದರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರ. ಫೆ 18-22 ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ.

Coastal Bulletin
ಬಿ.ಸಿ.ರೋಡ್ :ಶ್ರೀ ಕುಂಭೋದರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರ. ಫೆ 18-22 ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ.

ಬಂಟ್ವಾಳ :ಫೆ.18ನೇ ಆದಿತ್ಯವಾರದಿಂದ ಫೆ.22 ಗುರುವಾರ ತನಕ ಬಿ.ಸಿ.ರೋಡು ಕುಲಾಲರ ಮಠ ಶ್ರೀ ಕುಂಭೋದರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಶ್ರೀ ಕುಂಭೋದರಿ ದೇವಿ ಮತ್ತು ಕನಪಾಡಿತ್ತಾಯ ಜುಮಾದಿಬಂಟ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಇದರ ಪುರೋಹಿತರಾದ ಶ್ರೀ ಶಿವರಾಮ ಶಿಬರಾಯ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವಿಧಿವಿಧಾನಗಳೊಂದಿಗೆ ಜರಗಲಿರುವುದು. ಫೆ 18ರಂದು ಮಧ್ಯಾಹ್ನ 2ರಿಂದ ಬಿ ಸಿ ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದಿಂದ ಹೊರೆ ಕಾಣಿಕೆ ಸಮರ್ಪಣಾ ಮೆರವಣಿಗೆ ಕ್ಷೇತ್ರಕ್ಕೆ ಹೊರಡಲಿದೆ.

ಈ ಸಂದರ್ಭದಲ್ಲಿ ಭಜನೆ, ಧಾರ್ಮಿಕ ಪ್ರವಚನ, ಧರ್ಮ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿರುವುದು,ಈ ಎಲ್ಲಾ ಸತ್ಕಾರ್ಯಗಳಲ್ಲಿ

ತಾವೆಲ್ಲರೂ ಭಾಗವಹಿಸಿ, ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment