ತುಂಬೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ . ಆಕರ್ಷಕ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ, ಸರ್ವ ಧರ್ಮಿಯರ ಸಹಕಾರ. ವಿವಿಧ ಕಲಾ ತಂಡಗಳೊಂದಿಗೆ 100ಕ್ಕೂ ಅಧಿಕ ವಾಹನಗಳಲ್ಲಿ ಹೊರೆ ಕಾಣಿಕೆ ಸಮರ್ಪಣೆ.

Coastal Bulletin
ತುಂಬೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ . ಆಕರ್ಷಕ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ, ಸರ್ವ ಧರ್ಮಿಯರ ಸಹಕಾರ. ವಿವಿಧ ಕಲಾ ತಂಡಗಳೊಂದಿಗೆ 100ಕ್ಕೂ ಅಧಿಕ ವಾಹನಗಳಲ್ಲಿ ಹೊರೆ ಕಾಣಿಕೆ ಸಮರ್ಪಣೆ.

ಬಂಟ್ವಾಳ :ತುಂಬೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭವ್ಯ ಹೊರೆಕಾಣಿಕೆ ಮೆರವಣಿಗೆ ಹಾಗೂ ಶ್ರೀ ದೇವರಿಗೆ ಬೆಳ್ಳಿಯ ಪ್ರಭಾವಳಿ, ಗಣಪತಿ ದೇವರಿಗೆ ಬೆಳ್ಳಿಯ ಕವಚ, ಉತ್ಸವ ಪಲ್ಲಕಿಯ ಸಮರ್ಪಣೆಯು ಫೆ 11ರಂದು ಆದಿತ್ಯವಾರ ನಡೆಯಿತು.

ಪರಮ ಪೂಜ್ಯ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬಿ.ಸಿ. ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು, ಹೊರೆಕಾಣಿಕೆ ಮೆರವಣಿಗೆ ಬಿ.ಸಿ. ರೋಡು ಹೆದ್ದಾರಿ ಮೂಲಕ ಕೈಕಂಬ, ಬ್ರಹ್ಮರಕೂಟ್ಟು, ರಾಮಲ್‌ಕಟ್ಟಿ ರಸ್ತೆಯಾಗಿ ಶ್ರೀ ಕ್ಷೇತ್ರಕ್ಕೆ ಸುತ್ತು ಬಂದು ಸಂಪನ್ನಗೊಂಡಿತು. ನಂತರ ಉಗ್ರಾಣದಲ್ಲಿ ಸ್ಥಳೀಯ ತಂಡಗಳಿಂದ ಭಜನಾ ಕಾರ್ಯ ಕ್ರಮ ನಡೆಯಿತು.


ಭವ್ಯ ಮೆರವಣಿಗೆಯಲ್ಲಿ ಚೆಂಡೆ, ಗೊಂಬೆ,ಬ್ಯಾಂಡ್ ಸೆಟ್, ಕುಣಿತ ಭಜನಾ ತಂಡ, ಕಲಶದೊಂದಿಗೆ ಮಾತೆಯರು ಹಾಗೂ ಕಲಾ ತಂಡಗಳೊಂದಿಗೆ ತುಂಬೆ, ಕಳ್ಳಿಗೆ, ಬಿ.ಮೂಡ, ಪುದು, ಅಮ್ಮಾಡಿ, ಬಂಟ್ವಾಳ ಕಸ್ಟಾ, ಪಾಣೆ ಮಂಗಳೂರು ಗ್ರಾಮಗಳ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಬಾಂಧವರು ಹೊರೆಕಾಣಿಕೆ ನೀಡಿದ್ದು, ಶಾಂತಿ ಅಂಗಡಿ ಸಮೀಪ ಮುಸ್ಲಿಂ ಬಾಂಧವರು ಮೆರವಣಿಗೆಯ ಸಂದರ್ಭದಲ್ಲಿ ಫಲ ವಸ್ತುಗಳ ಜ್ಯೂಸ್ ನೀಡಿ ಸೌಹಾರ್ದತೆ ಮೆರೆದರು.ಭಕ್ತರು ಸಮರ್ಪಿಸಿದ ಪಲ್ಲಕಿ,ಕಾಣಿಕೆ ಡಬ್ಬಿ,ಸುವಸ್ತುಗಳು ಸುಮಾರು 100ಕ್ಕೂ ಅಧಿಕ ವಾಹನಗಳಲ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಣೆಯಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಚಂದ್ರ ಪ್ರಕಾಶ ಶೆಟ್ಟಿ, ಬೆಂಗಳೂರು ಜೆಪಿ ನಗರ ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಕಲ್ಲುರ್ಟಿ ದೈವಸ್ಥಾನದ ಧರ್ಮದರ್ಶಿ ರಾಜೇಶ್ ಬಂಗೇರ, ಜೀರ್ಣೋದ್ದಾರ ಸಮಿತಿ ಗೌರವಧ್ಯಕ್ಷ ಜಗನ್ನಾಥ ಚೌಟ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ತುಂಬೆ, ಜತೆ ಕಾರ್ಯದರ್ಶಿ ಉಮೇಶ್ ಸುವರ್ಣ ತುಂಬೆ, ಜೀವನ್ ಆಳ್ವ ತುಂಬೆಗುತ್ತು. ಕಾರ್ಯದರ್ಶಿ ಪ್ರಕಾಶ್ ಬಿ. ಶೆಟ್ಟಿ ಶ್ರೀಶೈಲ, ಪ್ರಮುಖರಾದ ವಿಶ್ವನಾಥ ಬಿ, ಪಿ ಲೋಕನಾಥ್ ಶೆಟ್ಟಿ, ಚಂದ್ರಹಾಸ ಡಿ ಶೆಟ್ಟಿ, ರವೀಂದ್ರ ಕಂಬಳಿ, ಕೃಷ್ಣ ಕುಮಾರ್ ಪೂಂಜ, ಗಣೇಶ್ ಸುವರ್ಣ, ಉಮೇಶ್ ಸಾಲ್ಯಾನ್ ಬೆಂಜನಪದವು ಸದಾಶಿವ ಡಿ ತುಂಬೆ, ಪ್ರವೀಣ್ ಬಿ ತುಂಬೆ, ಗಣೇಶ್ ಸಾಲಿಯಾನ್,ಉಮೇಶ್ ರೆಂಜೋಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment