ಬಂಟ್ವಾಳ :ರಾಜಿಕೀಯ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶವಿದ್ದಾಗ ಕೂಡ ದೂರ ಉಳಿದು ಬಿಟ್ಟವನು ನಾನು ಆದರೆ ಈ ಬಾರಿ ಕಾರ್ಯಕರ್ತ ಒಕ್ಕೊರೊಲಿನ ಒತ್ತಾಸೆಯ ಮೇರೆಗೆ ಭಾರತೀಯ ಜನತಾ ಪಕ್ಷದ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರ ಆಗ್ರಹಕ್ಕೆ ಜೊತೆಯಾಗಿದ್ದೇನೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.
ಅವರು ಈ ಬಾರಿ ನಮ್ಮ ಆಯ್ಕೆ ಸತ್ಯಜಿತ್ ಸುರತ್ಕಲ್ ಎಂಬ ಹೆಸರಿನಲ್ಲಿ ದ ಕ ಜಿಲ್ಲಾ ಅಭಿಮಾನಿ ಬಳಗದ ಬಂಟ್ವಾಳ ತಾಲೂಕು ಘಟಕದ ಪುದು ಗ್ರಾಮದ ನಡುಬೈಲ್ ಎಂಬಲ್ಲಿ ಫೆ.11ರಂದು ನಡೆದ ಪ್ರಮುಖ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂಘಟನೆ, ಸಂಘ ಗಟ್ಟಿಯಾದರೆ ಪ್ರತಿಯೊಬ್ಬ ಕಾರ್ಯಕರ್ತನಿಗೆ ಬೆಲೆ ಎಂಬ ಆಶಯದೊಂದಿಗೆ ನನ್ನ 21ನೇ ವಯಸ್ಸಿನಲ್ಲಿ ಹಿಂದೂ ಸಮಾಜದ ಏಳಿಗೆಗೆ ಹೋರಾಟಕ್ಕೆ ಇಳಿದು ಕಾರ್ಯಕರ್ತ ನೋವಿಗೆ ಧ್ವನಿಯಾಗಿದ್ದೇನೆ ಅದೆಷ್ಟೋ ಬಾರಿ ಜೈಲು, ಲಾಠಿ ಚಾರ್ಜು, ಪೆಟ್ಟು, ನೋವು, ಸಂಕಟ ಅನುಭವಿಸಿದ್ದೇನೆ,ರಾಜ್ಯ ಮಟ್ಟದ ಹೋರಾಟ, ಲವ್ ಜಿಹಾದ್, ಕಂಪನಿಗಳ ವಿರುದ್ಧ ಕಾರ್ಮಿಕ ಪರ ಹೋರಾಟ ಮಾಡಿದ್ದೇನೆ, ಯಾವತ್ತೂ ಹಿಂದೂ ಸಮಾಜದ ವಿರುದ್ಧ ಹೋಗಿಲ್ಲ, ನನ್ನದು ರಾಜಕೀಯ ಕ್ಕಾಗಿ ಹೋರಾಟ ಅಲ್ಲ ಎಂದರು.ಈ ಸಲ ಹಿಂದೂ ಸಮಾಜದ ಉನ್ನತಿಗೆಗಾಗಿ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಚುನಾವಣೆಗೆ ಸ್ಪರ್ದಿಸುವುದಾಗಿ ಹೇಳಿದರು,ಕಾರ್ಯಕರ್ತರೊಟ್ಟಿಗೆ ಬೆಳೆದು, ಕಾರ್ಯಕರ್ತರೊಟ್ಟಿಗೆ ಇರುವವನು ನಾನು ಎಂದು ಈ ಸಂದರ್ಭದಲ್ಲಿ ಹೇಳಿದರು.
ರಮೇಶ್ ವಗ್ಗ ಪ್ರಾಸ್ತವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ನಾಗಪ್ಪ ಕಬೇಲ,ಜಗದೀಶ ಬಂಗೇರ ಹೊಳ್ಳರಬೈಲು, ಸುರೇಶ ನಡುಬೈಲು, ಸಂತೋಷ ಕುಮಾರ್ ನೆತ್ತರಕೆರೆ, ಸತ್ಯೇಶ್ ಭಟ್ ಹೊಯ್ಗೆಗದ್ದೆ, ಇದ್ದರು.
ಪ್ರಮುಖರಾದ ಶಂಕರ್ ಭಟ್ ಹೊಯ್ಗೆಗದ್ದೆ, ಸಂತೋಷ್ ಪೊಳಲಿ, ಕಮಲಾಕ್ಷ ಧನುಪೂಜೆ, ಪ್ರವೀಣ್ ಬೆಂಜನಪದವು,ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.
ಪತ್ರಕರ್ತ ಸಂತೋಷ್ ಕುಲಾಲ್ ನತ್ತರಕೆರೆ ಸ್ವಾಗತಿಸಿ, ಧನ್ಯವಾದವಿತ್ತು, ಕಾರ್ಯಕ್ರಮ ನಿರೂಪಿಸಿದರು.