ಫರಂಗಿಪೇಟೆ: ಸೇವಾಂಜಲಿ ಪ್ರತಿಷ್ಠಾನದ ಅಶ್ರಯದಲ್ಲಿ 124ನೇ ರಕ್ತದಾನ ಶಿಬಿರ. ರಕ್ತದಾನ ಇನ್ನೊಬ್ಬರ ಜೀವ ಉಳಿಸುವ ಪುಣ್ಯದ ಕಾರ್ಯ :ಚಂದ್ರಪ್ರಕಾಶ್‌ ಶೆಟ್ಟಿ.

Coastal Bulletin
ಫರಂಗಿಪೇಟೆ: ಸೇವಾಂಜಲಿ ಪ್ರತಿಷ್ಠಾನದ ಅಶ್ರಯದಲ್ಲಿ 124ನೇ ರಕ್ತದಾನ ಶಿಬಿರ. ರಕ್ತದಾನ ಇನ್ನೊಬ್ಬರ ಜೀವ ಉಳಿಸುವ ಪುಣ್ಯದ ಕಾರ್ಯ :ಚಂದ್ರಪ್ರಕಾಶ್‌ ಶೆಟ್ಟಿ.

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ೧೨೪ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಭಾನುವಾರ ನಡೆಯಿತು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಅವರು ಮಾತನಾಡಿ ರಕ್ತದಾನ ಅತ್ಯಂತ ಪುಣ್ಯದ ಕೆಲಸ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವು ಉತ್ತಮವಾಗುವುದರ ಜೊತೆಗೆ ಇನ್ನೊಬ್ಬರ ಪ್ರಾಣ ಉಳಿಸಲು ಸಾಧ್ಯವಿದೆ ಎಂದರು. ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾ‌ರ್ ಪೂಂಜ ಅವರು ಸೇವೆಯೇ ತನ್ನ ಗುರಿ ಎನ್ನುವ ಉದ್ದೇಶದೊಂದಿಗೆ ನಿರಂತರವಾಗಿ ಇಂತಹ ಸೇವಾ ಕೆಲಸಗಳನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ಪೊಲೀಸ್‌

ಸಿಬ್ಬಂದಿ ಪ್ರಮೋದ್ ದೇವಾಡಿಗ, ಸುಕೇಶ್ ಶೆಟ್ಟಿ ತೇವು ಮೊದಲಾದ ಪ್ರಮುಖರು ರಕ್ತದಾನ ಮಾಡಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಪ್ರಮುಖರಾದ ನಾರಾಯಣ ಬಳ್ಳೂರು, ಕೆಎಂಸಿ ಆಸ್ಪತ್ರೆಯ ವೈದ್ಯೆ ಡಾ. ಅಧಿತಿ. ಬ್ಲಡ್ ಬ್ಯಾಂಕಿನ ಸೆಲಿನ್ ಜೋಸೆಫ್, ಅರ್ಜುನ್ ಪೂಂಜ, ಮೋಹನ್‌, ಸತ್ಯರಾಜ್ ಶೆಟ್ಟಿ, ರಾಜೇಶ್ ಕುಲಾಲ್ ತುಂಬೆ, ಶ್ರೀನಿವಾಸ ಕಾಲೇಜಿನ ಪ್ರಾಧ್ಯಪಕ ಜಯರಾಂ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 61 ಯುನಿಟ್ ರಕ್ತ ಸಂಗ್ರಹವಾಯಿತು.

Leave a Comment