ಬಂಟ್ವಾಳ :ಇನ್ಫೆಟ್ ಜೀಜಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ದೀಪಿಕಾ ಹೈಸ್ಕೂಲ್ ಮೊಡಂಕಾಪು ಇಲ್ಲಿ ಫೆ 24ರಂದು ಶುಕ್ರವಾರ ಬೆಳಿಗ್ಗೆ 10:30ರಿಂದ 11:30ರ ತನಕ ಹಾಗೂ 2:30ರಿಂದ ಸಂಜೆ 4 ಘಂಟೆಯ ತನಕ ಇದರ ಹತ್ತನೇ ತರಗತಿಯ ಮಕ್ಕಳಿಗೆ ಪರೀಕ್ಷೆಯ ಪೂರ್ವ ಸಿದ್ಧತಾ ತಯಾರಿ ಬಗ್ಗೆ ತರಬೇತಿ ಕಾರ್ಯಗಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ನಿವೃತ್ತ ಅಧ್ಯಾಪಕ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಮೊಡಂಕಾಪು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಪ್ರೊ. ಡಾ. ಗೋವರ್ಧನ್ ರಾವ್ ಇವರು ಪರೀಕ್ಷಾ ಸಿದ್ಧತೆಯ ಬಗ್ಗೆ
ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಸಂದೇಹವನ್ನು ಬಗೆಹರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಹೆಡ್ಮಾಸ್ಟರ್ಸ್ ಹಾಗೂ ರೋಟರಿ ಕ್ಲಬ್ ಮೊಡಂಕಾಪ್ ಇದರ ಸೇಕ್ರೆಟರಿ ಪಿ. ಎ. ರಹೀಮ್ ಉಪಸ್ಥಿತಿಯಿದ್ದರು.