ನವದೆಹಲಿ: ಭಾರತದಲ್ಲಿರುವ ಪಾಕಿಸ್ತಾನಿ (Pakistan) ಪ್ರಜೆಗಳನ್ನು ಕೂಡಲೆ ವಾಪಾಸ್ ಕಳುಹಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಅವರ ವೀಸಾಗಳನ್ನು ರದ್ದು ಮಾಡಲು ಸೂಚಿಸಿದೆ. ಈ ನಡುವೆ ಭಾರತದಲ್ಲಿ ಪಾಕಿಸ್ತಾನದ 14,000 ಪ್ರಜೆಗಳು ಇರಬಹುದೆಂದು ಅಂದಾಜು ಮಾಡಲಾಗಿದೆ. ಭಾರತ ಸರ್ಕಾರ ವಾರ್ಷಿಕ 1.5-2 ಲಕ್ಷ ಪಾಕಿಸ್ತಾನ ಪ್ರಜೆಗಳಿಗೆ ವೀಸಾ ನೀಡುತ್ತದೆ. ವಿವಿಧ ಉದ್ದೇಶಗಳಿಗಾಗಿ ಪಾಕ್ ಪ್ರಜೆಗಳಿಗೆ ಭಾರತ ವೀಸಾ ನೀಡುತ್ತದೆ. ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಲು ವಿಸಿಟರ್ ವೀಸಾ ನೀಡಲಾಗುವುದು. ಕಾನೂನು ಉದ್ದೇಶಗಳಿಗಾಗಿಯೂ ವಿಸಿಟರ್ ವೀಸಾ ನೀಡಲಾಗುವುದು. ಪಾಕಿಸ್ತಾನದ ಪ್ರಜೆಗಳಿಗೆ ಭಾರತಕ್ಕೆ ಪ್ರವಾಸಿ ವೀಸಾಗೆ ಅವಕಾಶವಿಲ್ಲ. ಪ್ರವಾಸಿ ವೀಸಾ ಬದಲು ವಿಸಿಟರ್ ವೀಸಾಗೆ ಅರ್ಜಿ ಸಲ್ಲಿಸ ಬೇಕಾಗುತ್ತದೆ.
Read Moreಬೆಂಗಳೂರು: ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ (Pahalgam terror attack) ಸಂಬಂಧ ಸಾಮಾಜಿಕ ತಾಣಗಳಲ್ಲಿ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congrfess) ಕಾರ್ಯಕರ್ತರ ನಡುವೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿದೇಶಗಳಿಗೆ ಹೋದಾಗಲೆಲ್ಲಾ ಕಾಶ್ಮೀರದಲ್ಲಿ (Kashmir) ಒಂದಲ್ಲಾ ಒಂದು ದಾಳಿ ನಡೆಯುತ್ತದೆ ಎಂದು ಕರ್ನಾಟಕ ಬಿಜೆಪಿ ಐಟಿ ಸೆಲ್ (Karnataka BJP) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಭಾರೀ ವಿವಾದಕ್ಕೀಡಾಗಿದೆ. ಈ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (KPCC) ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ ಸಿ.ಎಂ. ಧನಂಜಯ ಅವರು ದೂರು ನೀಡಿದ್ದು, ಈ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಐಟಿ ಸೆಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
Read Moreಬಂಟ್ವಾಳ, ಎ. 24: ಕಾಶ್ಮೀರದಲ್ಲಿ ಉಗ್ರರ ಬೀಕರ ದಾಳಿಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ವಿವಿಧ ಹಿಂದೂಪರ ಸಂಘಟನೆಗಳ ಸಹಯೋಗದಲ್ಲಿ ಎ. 24ರಂದು ಗುರುವಾರ ಸಂಜೆ ಬಿ.ಸಿ. ರೋಡಿನ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
Read Moreಬಂಟ್ವಾಳ:ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ ರಿ ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ, ಇದರ 38ನೇ ವರ್ಷದ ವಾರ್ಷಿಕ ಸವಿ ಸಂಭ್ರಮವು 26 ಎಪ್ರಿಲ್ 2025 ಶನಿವಾರ ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಲಿದೆ.
Read Moreತತ್ಕಾಲ್ (Tatkal) ಟಿಕೆಟ್ ಬುಕಿಂಗ್ ಎಂಬುದು ಭಾರತೀಯ ರೈಲ್ವೆಯಲ್ಲಿ (Indian Railway) ಕೊನೆಯ ಕ್ಷಣದ ಪ್ರಯಾಣಕ್ಕಾಗಿ ಅಂದರೆ ತುರ್ತಾಗಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಲು ವಿನ್ಯಾಸಗೊಳಿಸಲಾದ ಪ್ರೀಮಿಯಂ ಕೋಟಾವಾಗಿದೆ. ತಕ್ಷಣದ ಪ್ರಯಾಣಕ್ಕಾಗಿ ರೈಲು ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಲು ತತ್ಕಾಲ್ ಟಿಕೆಟ್ ಬುಕಿಂಗ್ (tatkal train tickets booking) ವಿಧಾನವನ್ನು ಜಾರಿಗೆ ತರಲಾಗಿದೆ. ಇದೀಗ ಭಾರತೀಯ ರೈಲ್ವೆ ಮೇ 25 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಬದಲಾವಣೆ ಪಾರದರ್ಶಕತೆಯನ್ನು ಹೆಚ್ಚಿಸುವ, ದುರುಪಯೋಗವನ್ನು ಕಡಿಮೆ ಮಾಡುವ ಹಾಗೂ ನಿಜವಾದ ಪ್ರಯಾಣಿಕರು ತಾವು ಕಾಯ್ದಿರಿಸಿದ ಸೀಟುಗಳನ್ನು ಪಡೆಯುವ ಸಾಧ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
Read More